ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಡೇ ಆ್ಯಂಡ್ ನೈಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯವು ಅಡಿಲೇಡ್‌ನಲ್ಲಿ ಇಂದು ಆರಂಭವಾಗಲಿದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಈ ಹಿಂದಿನ ಪ್ರವಾಸದಲ್ಲಿ ಟೀಂ ಇಂಡಿಯಾ ತನ್ನ ವಶಕ್ಕೆ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿ ಅದನ್ನು ಉಳಿಸಿಕೊಳ್ಳುವುದು ಭಾರತದ ಮೊದಲ ಆದ್ಯತೆಯಾಗಿರಲಿದೆ.
ಇದು ಟೀಂ ಇಂಡಿಯಾದ ಮೊದಲ ವಿದೇಶಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಈ ಮೊದಲ ಭಾರತವು 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನಲ್ಲಿ ಆಡಿ ಗೆಲುವು ದಾಖಲಿಸಿತ್ತು. ಇತ್ತ ಆಡಿರುವ ಏಳು ಡೇ ಆ್ಯಂಡ್ ನೈಟ್ ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ತಂಡವನ್ನು ಟಿಮ್ ಪೆಯ್ನ್ ಮುನ್ನಡೆಸುತ್ತಿದ್ದಾರೆ.
PublicNext
17/12/2020 09:21 am