ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕೆಎಲ್ ನನ್ನ ನೆಚ್ಚಿನ ಬ್ಯಾಟ್ಸ್‌ಮನ್'

ನವದೆಹಲಿ: ಕನ್ನಡಿಗ, ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಹಾಗೂ ಕೀಪಿಂಗ್ ಬಗ್ಗೆ ಅನೇಕ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕ್ರಿಕೆಟ್ ದಂತಕಥೆ, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್‌ ಬ್ರಿಯಾನ್ ಲಾರಾ ಅವರು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ನಡೆಸಿಕೊಡುವ ಚಹಲ್ ಟಿವಿ ಜೊತೆ ಮಾತನಾಡಿದ ಬ್ರಿಯಾನ್ ಲಾರಾ ಅವರು, ಸದ್ಯದ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಕೆ.ಎಲ್.ರಾಹುಲ್ ನನ್ನ ನೆಚ್ಚಿನ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 3 ಇನ್ನಿಂಗ್ಸ್‌ಗಳನ್ನಾಡಿರುವ ಕೆ.ಎಲ್.ರಾಹುಲ್ 93 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ 36 ಟೆಸ್ಟ್ ಪಂದ್ಯಗಳಲ್ಲಿ 2006 ರನ್, 35 ಏಕದಿನ ಪಂದ್ಯಗಳಲ್ಲಿ 1,332 ರನ್, 43 ಟಿ20ಐ ಪಂದ್ಯಗಳಲ್ಲಿ 1542 ರನ್ ಮತ್ತು 81 ಟಿ20ಐ ಪಂದ್ಯಗಳಲ್ಲಿ 2647 ರನ್ ಗಳಿಸಿದ್ದಾರೆ.

Edited By : Vijay Kumar
PublicNext

PublicNext

08/12/2020 07:51 pm

Cinque Terre

28.51 K

Cinque Terre

1

ಸಂಬಂಧಿತ ಸುದ್ದಿ