ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದ ಮೂಲಕ ಟಿ20 ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ. ಈ ಮೂಲಕ ಏಕದಿನ ಸರಣಿ ಸೋಲಿನ ಸೇಡನ್ನು ಕೊಹ್ಲಿ ಪಡೆ ತೀರಿಸಿಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಆದರೆ ಕೊಹ್ಲಿಯ ಲೆಕ್ಕಚಾರವನ್ನು ತಲೆಕೆಳಗಾಗಿಸುವಂತೆ ಆಸ್ಟ್ರೇಲಿಯಾ ಆರಂಭಿಕ ಮ್ಯಾಥ್ಯೂ ವೇಡ್ ಬ್ಯಾಟ್ ಬೀಸಿದ್ದರು.
ಕೊನೆಯ ನಾಲ್ಕು ಓವರ್ನಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಸಂಪೂರ್ಣ ಜವಾಬ್ದಾರಿವಹಿಸಿಕೊಂಡರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಗೆಲುವಿನ ಗುರಿಯನ್ನು ಕೊನೆಯ ಎರಡು ಓವರ್ನಲ್ಲಿ 26 ಕ್ಕೆ ತಂದು ನಿಲ್ಲಿಸಿದರು. ಆದರೆ 19ನೇ ಓವರ್ನಲ್ಲಿ ಸ್ಟ್ರೈಕ್ ಪಡೆದ ಹಾರ್ದಿಕ್ ಪಾಂಡ್ಯ ಬ್ಯಾಕ್ ಟು ಬ್ಯಾಕ್ ಬೌಂಡಿಗಳನ್ನು ಬಾರಿಸುವ ಮೂಲಕ 12 ರನ್ಗಳನ್ನು ಕಲೆಹಾಕಿದರು. ಅಂತಿಮವಾಗಿ ಟೀಮ್ ಇಂಡಿಯಾಗೆ ಗೆಲ್ಲಲು 6 ಎಸೆತಗಳಲ್ಲಿ 14 ರನ್ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ 2 ರನ್ ಕಲೆಹಾಕಿದ ಪಾಂಡ್ಯ, 2ನೇ ಮತ್ತು 3ನೇ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟರು. ಅಲ್ಲದೆ 22 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 44 ರನ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾ 2-0 ಅಂತರದೊಂದಿಗೆ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಅಲ್ಲದೆ ಏಕದಿನ ಸರಣಿ ಸೋಲಿನ ಸೇಡನ್ನು ಟಿ20 ಸರಣಿ ಮೂಲಕ ತೀರಿಸಿಕೊಂಡಿದೆ.
PublicNext
06/12/2020 05:41 pm