ಕೊಲೊಂಬೊ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಸದಾ ವಿಭಿನ್ನ ನೆಲೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ತಾರೆ. ಸದ್ಯ ಶ್ರೀಲಂಕಾದಲ್ಲಿ ನಡೀತಾ ಇರುವ ಲಂಕಾ ಪ್ರೀಮಿಯರ್ ಲೀಗ್ ಟಿ 20 ಟೂರ್ನಿ ಹಿರಿ-ಕಿರಿ ಆಟಗಾರರ ವಾಕ್ಸಮರಕ್ಕೆ ವೇದಿಕೆಯಾಗಿದೆ.
ಅಪ್ಘಾನಿಸ್ತಾನದ ಯುವ ಆಟಗಾರ ನವೀನ್ ಉಲ್ ಹಕ್ ಅವರಿಗೆ ಶಾಹೀದ್ ಅಫ್ರಿದಿ ಪಾಠ ಹೇಳಿದ್ದಾರೆ. 'ಮಗನೇ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೊದಲ ಸೆಂಚುರಿ ಬಾರಿಸಿದಾಗ ನೀನಿನ್ನೂ ಹುಟ್ಟಿರಲೇ ಇಲ್ಲ' ಎಂದಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಕ್ಯಾಂಡಿ ಟಸ್ಕರ್ಸ್ ಮತ್ತು ಗಾಲೆ ಗ್ಲಾಡಿಯೇಟರ್ಸ್ ನಡುವಿನ ಪಂದ್ಯದಲ್ಲಿ ನಡೆದ ಮಾತಿನ ಚಕಮಕಿ ವೇಳೆ ನವೀನ್ ಉಲ್ ಹಕ್ ಗೆ ಶಾಶೀದ್ ಅಫ್ರಿದಿ ಈ ಮಾತು ಹೇಳಿದ್ದಾರೆ.
ಪಂದ್ಯದ ವೇಳೆ ಕ್ಯಾಂಡಿ ಟಸ್ಕರ್ಸ್ ತಂಡದ ನವೀನ್ ಉಲ್ ಹಕ್ ಅವರು ಪಾಕಿಸ್ತಾನದ ಆಟಗಾರ ಮೊಹಮದ್ ಅಮೀನ್ ರನ್ನು ನಿಂದಿಸಿದ್ದರು. ಇದು ಶಾಹೀದ್ ಅಫ್ರಿದಿ ಅವರು ಆಕ್ರೋಶಗೊಳ್ಳಲು ಕಾರಣವಾಗಿದೆ.
PublicNext
02/12/2020 08:15 am