ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್, ವಿರಾಟ್ ಅರ್ಧಶತಕ ವ್ಯರ್ಥ- ಏಕದಿನ ಸರಣಿ ಮುಡಿಗೇರಿಸಿಕೊಂಡ ಆಸೀಸ್ ಪಡೆ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಸರಣಿಯಲ್ಲಿಯೂ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಸರಣಿ ಜಯದ ಕನಸನ್ನು ಕೈಚೆಲ್ಲಿಕೊಂಡಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 51 ರನ್‌ಗಳಿಂದ ಗೆದ್ದು ಬೀಗಿದೆ.

ಸ್ಟೀವ್ ಸ್ಮಿತ್ ಅವರ ಅಮೋಘ ಶತಕ, ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್, ಮ್ಯಾಕ್ಸ್​ವೆಲ್ ಹಾಗೂ ಮಾರ್ನಸ್ ಲಾಬುಶೇನ್ ಅವರ ಅರ್ಧಶತಕದ ನೆರವಿನಿಂದ ಆಸೀಸ್ 50 ಓವರ್​ಗಳಲ್ಲಿ ಬರೋಬ್ಬರಿ 389 ರನ್ ಚಚ್ಚಿತ್ತು.

ಆಸ್ಟ್ರೇಲಿಯಾ ನೀಡಿದ್ದ ಬೃಹತ್ ಮೊತ್ತ ಗುರಿಯನ್ನು ಬೆನ್ನಟ್ಟಿದ ಭಾರತ ರನ್‌ ಮಳೆ ಹರಿಸುವಲ್ಲಿ ವಿಫಲವಾಯಿತು. ಟೀಂ ಇಂಡಿಯಾ 9 ವಿಕೆಟ್‌ಗಳ ನಷ್ಟಕ್ಕೆ 338 ರನ್‌ ಗಳಿಸಲು ಶಕ್ತವಾಯಿತು. ಓಪನರ್​ಗಳಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಮಯಾಂಕ್ ಅಗರ್ವಾಲ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. 7 ಓವರ್ ಆಗುವ ಹೊತ್ತಿಗೆ 58 ರನ್ ಬಾರಿಸಿದರು. ಆದರೆ ದೊಡ್ಡ ಹೊಡೆತಕ್ಕೆ ಮುಂದಾದ ಧವನ್ 30 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ 28 ರನ್ ಗಳಿಸಿದ್ದ ಮಯಾಂಕ್ ವಿಕೆಟ್‌ ಕಳೆದುಕೊಂಡರು.

ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಈ ನಡುವೆ ಕೊಹ್ಲಿ ಅರ್ಧಶತಕ ಪೂರೈಸಿದರು. 36 ಎಸೆತಗಳಲ್ಲಿ 38 ರನ್ ಗಳಿಸಿದ್ದ ಅಯ್ಯರ್ ಕ್ಯಾಚ್‌ ಒಪ್ಪಿಸಿ ಹೊರ ನಡೆದರು. ಈ ಮಧ್ಯೆ ನಾಯಕ ಕೊಹ್ಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ಸಾಥ್ ನೀಡಿದರು. ಈ ಜೋಡಿಯು ನಾಲ್ಕನೇ ವಿಕೆಟ್‌ ನಷ್ಟಕ್ಕೆ 72 ರನ್‌ಗಳ ಕೊಡುಗೆ ನೀಡಿತು. ಅರ್ಧಶತಕದ ಬಳಿಕ ಸ್ಫೋಟಕ ಬ್ಯಾಟಿಂಗ್‌ ಇಳಿದ ಕೆ.ಎಲ್.ರಾಹುಲ್ (76 ರನ್‌) ವಿಕೆಟ್ ಕಳೆದುಕೊಂಡರು.

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 28 ರನ್, ರವೀಂದ್ರ ಜಡೇಜಾ 24 ರನ್, ನವದೀಪ್‌ ಸೈನಿ ಅಜೇಯ 10 ರನ್‌, ಯಜುವೇಂದ್ರ ಚಹಾಲ್ ಅಜೇಯ 4 ರನ್, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದರೆ ಜಸ್​ಪ್ರೀತ್ ಬುಮ್ರಾ ಯಾವುದೇ ರನ್‌ ಗಳಿಸದೆ ವಿಕೆಟ್‌ ಕಳೆದುಕೊಂಡರು.

Edited By : Vijay Kumar
PublicNext

PublicNext

29/11/2020 05:26 pm

Cinque Terre

70.14 K

Cinque Terre

4

ಸಂಬಂಧಿತ ಸುದ್ದಿ