ಸಿಡ್ನಿ: ಬಾಡಿ ಚೆಕ್ ಮಾಡಲು ಬಂದ ಟೀಂ ಇಂಡಿಯಾದ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಅವರಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರೋನ್ ಫಿಂಚ್ ಪಂಚ್ ಮಾಡಿದ್ದಾರೆ.
ಏಕದಿನ ಪಂದ್ಯದ ಎರಡನೇ ಪಂದ್ಯದಲ್ಲಿ ನವದೀಪ್ ಸೈನಿ 12ನೇ ಓವರ್ ಬೌಲ್ ಮಾಡುತ್ತಿದ್ದರು. ಎಸೆದ 5ನೇ ಎಸೆತವನ್ನು ಹೊಡೆಯಲು ಫಿಂಚ್ ಪ್ರಯತ್ನ ಪಟ್ಟಿದ್ದರು. ಆದರೆ ಬಾಲ್ ಬ್ಯಾಟ್‌ಗೆ ಸಿಗದೇ ಹೊಟ್ಟೆಗೆ ಬಡಿಯಿತು. ಈ ವೇಳೆ ಫಿಂಚ್ ಮತ್ತು ವಾರ್ನರ್ ಮಾತನಾಡುತ್ತಿದ್ದಾಗ ಹತ್ತಿರ ಬಂದ ರಾಹುಲ್ ಗ್ಲೌಸ್ ನೋಡಿ ಎಡಕೈಯಲ್ಲಿ ದೇಹ ಮುಟ್ಟಲು ಯತ್ನಿಸಿದರು. ಆಗ ಫಿಂಚ್ ಎರಡು ಕೈಯಲ್ಲಿ ರಾಹುಲ್ ಹೊಟ್ಟೆಗೆ ಮೆಲ್ಲಗೆ ಕೈಯಿಂದ ಪಂಚ್ ಮಾಡಿದ್ದಾರೆ. ಇದರಿಂದಾಗಿ ಅಲ್ಲಿದ್ದ ಆಟಗಾರರು ನಗೆ ಬೀರಿದರು.
PublicNext
29/11/2020 02:54 pm