ಮುಂಬೈ: ಈಗಷ್ಟೇ 18ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಓಂ ಮಹಾಜನ್ ಎಂಬ ಹದಿಹರೆಯದ ಯುವಕ, ದೇಶಾದ್ಯಂತ ವೇಗವಾಗಿ ಬೈಸಿಕಲ್ ಸವಾರಿ ಮಾಡುವ ಮೂಲಕ ಎಲ್ಲರೂ ನಿಬ್ಬೆರಗಾಗುವ ಹೊಸ ದಾಖಲೆ ನಿರ್ಮಿಸಿದ್ದಾನೆ.
ಮಹಾರಾಷ್ಟ್ರದ ನಾಸಿಕ್ ನಿವಾಸಿಯಾದ ಮಹಾಜನ್, ಜಮ್ಮು- ಕಾಶ್ಮೀರದ ಶ್ರೀನಗರದಿಂದ ಕನ್ಯಾಕುಮಾರಿಯವರೆಗೂ 8 ದಿನಗಳಲ್ಲಿ 3,600 ಕಿ.ಮೀ ದೂರ ಪ್ರಯಾಣಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾನೆ.
ಕನ್ಯಾಕುಮಾರಿಗೆ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಓಂ ಮಹಾಜನ್, ಕಳೆದ ವಾರ ಕೊರೆಯುವ ಚಳಿಯ ನಡುವೆ ಶ್ರೀನಗರದಿಂದ ಸ್ಲೈಕ್ಲಿಂಗ್ ಆರಂಭಿಸಿ, ಮಧ್ಯಪ್ರದೇಶದಲ್ಲಿ ಭಾರೀ ಮಳೆಯ ನಡುವೆ ಸಾಗಿ ದಕ್ಷಿಣದ ತುದಿ ಕನ್ಯಾಕುಮಾರಿಯನ್ನು ತಲುಪಿರುವುದಾಗಿ ತಿಳಿಸಿದರು.
ಶ್ರೀನಗರಿಂದ ಕನ್ಯಾಕುಮಾರಿಯವರೆಗೂ ವೇಗದ ಬೈಸಿಕಲ್ ಸವಾರಿಯಲ್ಲಿ ಅವರ ಚಿಕ್ಕಪ್ಪ ಗಿನ್ನಿಸ್ ದಾಖಲೆ ಹೊಂದಿದ್ದು, ಇತ್ತೀಚಿಗೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಭರತ್ ಪನ್ನು ಈ ದಾಖಲೆಯನ್ನು ಮುರಿದ್ದಾರೆ. ಅದು ಗಿನ್ನಿಸ್ ದಾಖಲೆಗೆ ಇನ್ನೂ ಸೇರಬೇಕಾಗಿದೆ. ಪನ್ನು ದಾಖಲೆಯತ್ತ ತನ್ನ ಕಣ್ಣನ್ನು ನೆಟ್ಟಿರುವುದಾಗಿ ಮಹಾಜನ್ ಹೇಳಿದರು.
ಜಗತ್ತಿನಲ್ಲಿ ಅತ್ಯಂತ ಕಠಿಣ ಸೈಕಲ್ ರೇಸ್ ಆದ RAAM ಆತನ ಮುಂದಿನ ಗುರಿಯಾಗಿದೆ. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಓಂ 12 ದಿನಗಳಲ್ಲಿ 4,800 ಕಿ.ಮೀ ಸವಾರಿ ಮಾಡಿದಂತಾಗಲಿದೆ.
PublicNext
21/11/2020 09:50 pm