ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡೋದು ನನ್ನ ಅಂತಿಮ ಗುರಿ'

ನವದೆಹಲಿ: ಐಪಿಎಲ್ 13ನೇ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್, ಫೀಲ್ಡಿಂಗ್ ಪ್ರದರ್ಶನದಿಂದಲೇ ಆರ್‌ಸಿಬಿ ಯುವ ಆಟಗಾರ ದೇವದತ್ ಪಡಿಕ್ಕಲ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾರೆ. ಈ ಬಗ್ಗೆ ಅವರು ಕೂಡ ಇಂತಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನದಲ್ಲಿ ಕ್ರಿಕೆಟರ್ ಆಗಿ ನಿಮ್ಮ ಅಂತಿಮ ಗುರಿಯೇನು ಎಂದು ಪ್ರಶ್ನೆಗೆ ಉತ್ತರಿಸಿದ ದೇವದತ್ ಪಡಿಕ್ಕಲ್, 'ಕ್ರಿಕೆಟರ್ ಒಬ್ಬನನ್ನು ಟೆಸ್ಟ್ ಕ್ರಿಕೆಟ್ ವ್ಯಾಖ್ಯಾನಿಸುತ್ತದೆ. ಅದೇ ಪ್ರತಿ ಕ್ರಿಕೆಟರ್‌ಗೆ ಅಂತಿಮ ಗುರಿ. ನಾನು ಮುಂದೊಮ್ಮೆ ಏನಾದರೂ ಮಾಡಲು ಬಯಸುವುದಿದ್ದರೆ ಅದು ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡುವುದು' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

13/11/2020 06:50 pm

Cinque Terre

47.56 K

Cinque Terre

1

ಸಂಬಂಧಿತ ಸುದ್ದಿ