ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಬೈನಿಂದ ಮುಂಬೈಗೆ ಚಿನ್ನ ತಂದು ಸಿಕ್ಕಿಬಿದ್ದ ಕೃಣಾಲ್ ಪಾಂಡ್ಯ!

ಮುಂಬೈ: ಯುಎಇನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಟೂರ್ನಿ ಮುಗಿಸಿಕೊಂಡು ಟೀಂ ಇಂಡಿಯಾ ಆಲ್‌ರೌಂಡರ್ ಮುಂಬೈಗೆ ಮರಳಿದ್ದಾರೆ. ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡಿದೆ.

ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತು ಕೈವಶವಿರಿಸಿದ್ದಕ್ಕಾಗಿ ಕೃಣಾಲ್ ಅವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಡಿಆರ್‌ಐ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕೃಣಾಲ್ ಐಪಿಎಲ್ ಮುಗಿಸಿ ಗುರುವಾರ ಸಂಜೆ 5 ಗಂಟೆಯ ವಿಮಾನದಲ್ಲಿ ಮುಂಬೈಗೆ ಬಂದಿಳಿದಿದ್ದರು. ತಕ್ಷಣವೇ ಡಿಆರ್‌ಐ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿ ವಿಚಾರಣೆಗೊಳಪಡಿಸಿದಾಗ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.

Edited By : Vijay Kumar
PublicNext

PublicNext

12/11/2020 11:08 pm

Cinque Terre

86.32 K

Cinque Terre

1

ಸಂಬಂಧಿತ ಸುದ್ದಿ