ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಶೆರ್ಫೇನ್ ರುದರ್‌ಫೋರ್ಡ್ ಅವರು ಮುಂಬೈ ಇಂಡಿಯನ್ಸ್ ಜಾಕೆಟ್ ಹಾಗೂ ಮಾಸ್ಕ್ ಧರಿಸಿ ಪಾಕಿಸ್ತಾನದ ಸೂಪರ್ ಲೀಗ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಶೆರ್ಫೇನ್ ರುದರ್‌ಫೋರ್ಡ್ ಪಿಎಸ್‌ಎಲ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ಪ್ರತಿನಿಧಿಸುತ್ತಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಟೂರ್ನಿ ನವೆಂಬರ್ 14ರಿಂದ ಪುನಾರಂಭಗೊಳ್ಳಲಿದೆ.
22ರ ಹರೆಯದ ಶೆರ್ಫೇನ್ ರುದರ್‌ಫೋರ್ಡ್ ಐಪಿಎಲ್ 2020 ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾಗವಾಗಿದ್ದರೂ ಈ ಆವೃತ್ತಿಯಲ್ಲಿ ಒಂದೇ ಐಪಿಎಲ್ ಪಂದ್ಯವನ್ನು ಆಡಲಿಲ್ಲ. ಸದ್ಯ ಪಿಎಸ್‌ಎಲ್ ಟೂರ್ನಿಯ ಪ್ಲೇ ಆಫ್‌ಗೆ ಎಂಟ್ರಿಕೊಟ್ಟ ಶೆರ್ಫೇನ್ ರುದರ್‌ಫೋರ್ಡ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರೊಬ್ಬರು 'ಶೆರ್ಫೇನ್ ಅವರಿಗೆ ಕರಾಚಿ ಕಿಂಗ್ಸ್ ಟ್ರ್ಯಾಕ್ ಸೂಟ್ ಕಳುಹಿಸಬೇಕಾಗಿತ್ತು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
PublicNext
12/11/2020 09:00 pm