ಐಪಿಎಲ್ 2020 ಟೂರ್ನಿಯಲ್ಲಿ ಅಗ್ರ ಮೂವರು ಬೌಲರ್‌ಗಳು ಕನಿಷ್ಠ 25 ವಿಕೆಟ್‌ಗಳನ್ನು ಪಡೆದಿರುವುದು ವಿಶೇಷವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಕಾಗಿಸೊ ರಬಾಡಾ 30 ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಕಿಟ್ಟಿಸಿಕೊಂಡಿದ್ದಾರೆ.
ನಂತರದ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವೇಗಿ ಜಸ್‌ಪ್ರೀತ್ ಬುಮ್ರಾ 27 ವಿಕೆಟ್ ಮತ್ತು ಟ್ರೆಂಟ್ ಬೌಲ್ಟ್ 25 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅನ್ರಿಕ್ ನಾರ್ಟ್ಜೆ 22 ವಿಕೆಟ್ ಕಿತ್ತರೆ, ಆರ್‌ಸಿಬಿಯ ಯಜುವೇಂದ್ರ ಚಹಲ್ 21 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ 5 ಬೌಲರ್‌ಗಳಲ್ಲಿ ಏಕೈಕ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಚಹಲ್ ಪಾತ್ರರಾಗಿದ್ದಾರೆ.
PublicNext
11/11/2020 06:14 pm