ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಸ್‌ಕೆ ಪರ ಇಂದು ಧೋನಿಗೆ ಕೊನೆ ಪಂದ್ಯವೇ?- ಅಚ್ಚರಿಯ ಸ್ಪಷ್ಟನೆ ಕೊಟ್ಟ ಮಾಹಿ

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ ಟೂರ್ನಿಯೇ ಧೋನಿ ಅವರ ಕೊನೆಯ ಪ್ರದರ್ಶನವಾಗಲಿದೆ ಎಂಬ ಊಹಾಪೋಹಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ತೆರೆ ಎಳೆದಿದ್ದಾರೆ.

ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಟಾಸ್ ವೇಳೆ ಈ ವಿಚಾರವನ್ನು ಧೋನಿ ತಿಳಿಸಿದ್ದಾರೆ. ಪಂದ್ಯದ ಟಾಸ್ ಸಮಯದಲ್ಲಿ ನಿರೂಪಕ ಡ್ಯಾನಿ ಮಾರಿಸನ್ ಧೋನಿ ಅವರನ್ನು ಪಂಜಾಬ್ ವಿರುದ್ಧದ ಪಂದ್ಯ ತಮ್ಮ ಕೊನೆಯ ಐಪಿಎಲ್ ಆಟವಾಗಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ, "ಖಂಡಿತವಾಗಿಯೂ ಅಲ್ಲ'' ಎಂದು ಹೇಳಿದ್ದಾರೆ.

ಈ ಮೂಲಕ ಮುಂದಿನ ಟೂರ್ನಿಯಲ್ಲೂ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಧೋನಿ ಅಭಿಮಾನಿಗಳಿಗೆ ಹೆಚ್ಚಿನ ಖುಷಿ ನೀಡಿದೆ.

Edited By : Vijay Kumar
PublicNext

PublicNext

01/11/2020 05:47 pm

Cinque Terre

63.27 K

Cinque Terre

5

ಸಂಬಂಧಿತ ಸುದ್ದಿ