ದುಬೈ: ಐಪಿಎಲ್ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಬ್ಯಾಟಿಂಗ್ - ಬೌಲಿಂಗ್ ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಪೊಲಾರ್ಡ್ ಪಡೆ 9 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ.
ಇತ್ತ ಹೀನಾಯ ಸೋಲುಂಡಿರುವ ಡೆಲ್ಲಿ ಪ್ಲೇ ಆಫ್ ಹಂತಕ್ಕೇರಲು ಉಳಿದಿರುವ ಒಂದು ಪಂದ್ಯ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಡೆಲ್ಲಿ ನೀಡಿದ್ದ 111 ರನ್ ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಭರ್ಜರಿ ಆರಂಭ ಪಡೆದುಕೊಂಡಿತು.
ಓಪನರ್ ಗಳಾದ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್ ಗೆ 68 ರನ್ ಗಳ ಜೊತೆಯಾಟ ಆಡಿದರು.
ಡಿಕಾಕ್ 28 ಎಸೆತಗಳಲ್ಲಿ 26 ರನ್ ಗಳಿಸಿ ಔಟ್ ಆದರೂ ತಂಡಕ್ಕೆ ಯಾವುದೇ ಹಿನ್ನಡೆಯಾಗಲಿಲ್ಲ.
ಕಿಶನ್ ಹಾಗೂ ಸೂರ್ಯಕುಮಾರ್ ಜೊತೆಗೂಡಿ 14.2 ಓವರ್ ಗಳಲ್ಲೇ ತಂಡಕ್ಕೆ ಗೆಲುವು ತಂದಿಟ್ಟರು.
ಕಿಶನ್ 47 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 73 ರನ್ ಬಾರಿಸಿದರೆ, ಸೂರ್ಯಕುಮಾರ್ ಅಜೇಯ 12 ರನ್ ಗಳಿಸಿದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಶಿಖರ್ ಧವನ್ ಶೂನ್ಯಕ್ಕೆ ನಿರ್ಗಮಿಸಿದರೆ, ಕಮ್ ಬ್ಯಾಕ್ ಮಾಡಲು ಮತ್ತೆ ಎಡವಿದ ಪೃಥ್ವಿ ಶಾ 10 ರನ್ ಗೆ ಬ್ಯಾಟ್ ಕೆಳಗಿಟ್ಟರು.
ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಜೊತೆಗೂಡಿ 35 ರನ್ ಗಳ ಕಾಣಿಕೆ ನೀಡಿದರಷ್ಟೆ.
ಅಯ್ಯರ್ 25 ರನ್ ಗೆ ಔಟ್ ಆದರೆ, ಪಂತ್ 21 ರನ್ ಗಳಿಸಿ ನಿರ್ಗಮಿಸಿದರು.
ಮಾರ್ಕಸ್ ಸ್ಟಾಯಿನಿಸ್ 2 ರನ್ ಗೆ ಬ್ಯಾಟ್ ಕೆಳಗಿಟ್ಟರು. ಶಿಮ್ರೋನ್ ಹೆಟ್ಮೇರ್ 11 ಹಾಗೂ ಹರ್ಷಲ್ ಪಟೇಲ್ 5 ರನ್ ಗಳಿಸಿ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದರು.
ಬಳಿಕ ಬಂದ ಬ್ಯಟ್ಸ್ ಮನ್ ಗಳು ಯಾರು ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಲಿಲ್ಲ.
ಅಂತಿಮವಾಗಿ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತಷ್ಟೆ, ಮುಂಬೈ ಪರ ಬುಮ್ರಾ ಹಾಗೂ ಬೌಲ್ಟ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ನಥನ್ ಕಲ್ಟರ್ ಹಾಗೂ ರಾಹುಲ್ ಚಹಾರ್ 1 ವಿಕೆಟ್ ಪಡೆದರು.
PublicNext
31/10/2020 07:47 pm