ದುಬೈ: ಐಪಿಎಲ್ 13ನೇ ಆವೃತ್ತಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದವು ಡೆಲ್ಲಿ ತಂಡಕ್ಕೆ ಮಹತ್ವದ್ದಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡವು ಈಗಾಗಲೇ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಶ್ರೇಯಷ್ ಅಯ್ಯರ್ ತಂಡವು ಪ್ಲೇ ಆಫ್ ಖಾತರಿ ಪಡಿಸಿಕೊಳ್ಳಲು ಇಂದಿನ ಪಂದ್ಯದ ಗೆಲುವು ಬಹುಮುಖ್ಯವಾಗಿದೆ.
ದುಬೈನಲ್ಲಿ ಇಂದು 22ರಿಂದ 33 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದ್ದು, ಮಧ್ಯಾಹ್ನ ಶೆಖೆ ಹೆಚ್ಚಿರಲಿದೆ. ಮೈದಾನದಲ್ಲಿ ಈ ಹಿಂದೆ ನಡೆದ ಪಂದ್ಯಗಳಲ್ಲಿ ವಿವಿಧ ತಂಡವು ರನ್ ಮಳೆ ಸುರಿಸಿವೆ. ಹೀಗಾಗಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಪ್ರದರ್ಶನವು ಉತ್ತಮವಾಗಿರುವುದು ಅಗತ್ಯವಾಗಿದೆ.
ಸಂಭಾವ್ಯ ಆಟಗಾರರು:
ಡೆಲ್ಲಿ: ಶಿಖರ್ ಧವನ್, ಪೃಥ್ವಿ ಶಾ/ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಅಕ್ಸರ್ ಪಟೇಲ್, ಕಾಗಿಸೊ ರಬಾಡ, ಆರ್ ಅಶ್ವಿನ್, ಹರ್ಷಲ್ ಪಟೇಲ್/ತುಷಾರ್ ದೇಶಪಾಂಡೆ, ಅನ್ರಿಚ್ ನಾರ್ಟ್ಜೆ.
ಮುಂಬೈ: ಕ್ವಿಂಟನ್ ಡಿ ಕಾಕ್ (ವಿಕೆ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ಸಿ), ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬೂಮ್ರಾ.
PublicNext
31/10/2020 01:37 pm