ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಋತುರಾಜ್ ಅರ್ಧಶತಕ, ಕೊನೆಯಲ್ಲಿ ಜಡೇಜಾ ಸಿಕ್ಸರ್ ಸುರಿಮಳೆ: ಕೆಕೆಆರ್ ವಿರುದ್ಧ ಚೆನ್ನೈಗೆ 6 ವಿಕೆಟ್‌ ಗೆಲುವು

ಅಬುಧಾಬಿ: ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅಬ್ಬರದ ಅರ್ಧಶತಕ ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ ಸಿಕ್ಸರ್ ಸುರಿಮಳೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆದ ಐಪಿಎಲ್ 13ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಟಾಸ್ ಸೋತು ಬೌಲಿಂಗ್ ಮಾಡಿದ್ದ ಕೆಕೆಆರ್ 173 ರನ್‌ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಕೊನೆಯ 4 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿ ಗೆಲುವು ದಾಖಲಿಸಿದೆ.

ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 72 ರನ್‌ (53 ಎಸೆತ, 6 ಬೌಂಡರಿ, 2 ಸಿಕ್ಸರ್), ಅಂಬಾಟಿ ರಾಯುಡು 38 ರನ್ (20 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಶೇನ್ ವಾಟ್ಸನ್ 14 ರನ್ (19 ಎಸೆತ, 1 ಬೌಂಡರಿ, 1 ಸಿಕ್ಸ್) ದಾಖಲಿಸಿದರೆ, ನಾಯಕ ಎಂ.ಎಸ್‌.ಧೋನಿ ಕೇವಲ ಒಂದು ರನ್‌ಗೆ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಸ್ಯಾಮ್ ಕುರ್ರನ್ 13 ರನ್ ಹಾಗೂ ರವೀಂದ್ರ ಜಡೇಜಾ 31 ರನ್‌ (11 ಎಸೆತ, 2 ಬೌಂಡರಿ, 3 ಸಿಕ್ಸರ್) ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ನಿತೀಶ್ ರಾಣಾ 87 ರನ್‌ (61 ಎಸೆತ, 10 ಬೌಂಡರಿ, 4 ಸಿಕ್ಸರ್), ಶುಭ್‌ಮನ್ ಗಿಲ್ 26 ರನ್ (17 ಎಸೆತ, 4 ಬೌಂಡರಿ) ಸಹಾಯದಿಂದ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು.

Edited By : Vijay Kumar
PublicNext

PublicNext

29/10/2020 11:18 pm

Cinque Terre

68.56 K

Cinque Terre

2

ಸಂಬಂಧಿತ ಸುದ್ದಿ