ಸಿಡ್ನಿ: ಭಾರತ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಆಸ್ಟ್ರೇಲಿಯಾ ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ನವೆಂಬರ್ 27ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಮೊದಲಿಗೆ ಸೀಮಿತ ಓವರ್‌ಗಳ ಸರಣಿ ನಡೆಯಲಿದೆ. ಆಸೀಸ್ ತಂಡವನ್ನು ಆರೋನ್ ಫಿಂಚ್ ಮುನ್ನಡೆಸಲಿದ್ದು, ಎರಡು ಪ್ರಮುಖ ಬದಲಾವಣೆಗಳು ಆಗಿದೆ. ನ್ಯೂಸೌತ್ ವೇಲ್ಸ್ ತಂಡದ ಆಲ್‌ರೌಂಡರ್, ಬಿಗ್‌ಬ್ಯಾಶ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಮುನ್ನಡೆಸುವ ಮೌಸಿಸ್ ಹೆನ್ರಿಕ್ಸ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಇವರ ಜೊತೆಗೆ 21ರ ಹರೆಯದ ಯುವ ಆಟಗಾರ ಕ್ಯಾಮೆರೊನ್ ಗ್ರೀನ್ ಆಸೀಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
ಆಸ್ಟ್ರೇಲಿಯಾ ತಂಡ ಹೀಗಿದೆ:
ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮೊಯ್ಸಿಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೈನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್ , ಡೇವಿಡ್ ವಾರ್ನರ್, ಆಡಮ್ ಜಂಪಾ.
PublicNext
29/10/2020 03:45 pm