ಶಾರ್ಜಾ : ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಉತ್ತಮ ಮೊತ್ತ ಕಲೆಹಾಕಿದೆ.
ಕೆಕೆಆರ್ 20 ಓವರ್ ಗಳಲ್ಲಿ 149 ರನ್ ಬಾರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು.
ಮ್ಯಾಕ್ಸ್ ವೆಲ್ ನ ಮೊದಲ ಓವರ್ ನಲ್ಲಿ ನಿತೀಶ್ ರಾಣ ಸೊನ್ನೆ ಸುತ್ತಿದರೆ, 2ನೇ ಓವರ್ ನ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ರಾಹುಲ್ ತ್ರಿಪಾಠಿ(7) ಕೀಪರ್ ಗೆ ಕ್ಯಾಚಿಟ್ಟು ನಿರ್ಗಮಿಸಿದರು.
ದಿನೇಶ್ ಕಾರ್ತಿಕ್ ಬಂದ ಬೆನ್ನಲ್ಲೆ ಪೆವಿಲಿಯನ್ ಹಾದಿ ಹಿಡಿದರು.
ಈ ಸಂದರ್ಭ ಒಂದಾದ ನಾಯಕ ಇಯಾನ್ ಮಾರ್ಗನ್ ಹಾಗೂ ಶುಭ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸಿದರು.
ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡರೂ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.
10 ಓವರ್ ಆಗುವ ಹೊತ್ತಿಗೆ ಇವರಿಬ್ಬರು ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು.
ಜೊತೆಗೆ 80 ರನ್ ಗಳ ಅಮೋಘ ಜೊತೆಯಾಟ ಆಡಿದರು.
ಆದರೆ, ಸಿಕ್ಸ್ ಸಿಡಿಸುವಲ್ಲಿ ಎಡವಿದ ಮಾರ್ಗನ್ 25 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ 40 ರನ್ ಗೆ ಔಟ್ ಆದರು.
ಸುನೀಲ್ ನರೈನ್(6) ಇಂದಿನ ಪಂದ್ಯದಲ್ಲಿ ನಡೆಯಲಿಲ್ಲ.
ಬಳಿಕ ಬಂದ ಕಮಲೇಶ್ ನಾಗರಕೋಟಿ(6) ಹಾಗೂ ಪ್ಯಾಟ್ ಕಮಿನ್ಸ್(1) ಬೇಗನೆ ನಿರ್ಗಮಿಸಿದರು.
ಆದರೆ ಗಿಲ್ ತಮ್ಮ ಆರ್ಭಟ ಮುಂದುವರೆಸಿ ತಂಡದ ರನ್ ಗತಿಯನ್ನು ಏರಿಸಿದರು.
45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ 57 ರನ್ ಸಿಡಿಸಿದರು.
ಲಾಕಿ ಫರ್ಗೂಸನ್ 13 ಎಸೆತಗಳಲ್ಲಿ ಅಜೇಯ 24 ರನ್ ಚಚ್ಚಿದರು.
ಅಂತಿಮವಾಗಿ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
PublicNext
26/10/2020 09:20 pm