ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020 : KKR vs KXIP: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಶಾರ್ಜಾ : ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಂದಿನ ಹಂತಕ್ಕೇರಲು ಇಂದಿನ ಪಂದ್ಯ ಬಹು ಮುಖ್ಯವಾಗಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣೆಸಾಟ ಶುರುವಾಗಿದೆ.

ಈಗಾಗಲೇ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಕೆ. ಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇಂದುಕೂಡ ಕಣಕ್ಕಿಳಿಯುತ್ತಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಕ್ರಿಸ್ ಗೇಲ್, ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಅರ್ಶ್ದೀಪ್ ನಾಥ್, ಮೊಹಮ್ಮದ್ ಶಮಿ.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಸುನೀಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ.

ಪಂಜಾಬ್-ಕೋಲ್ಕತ್ತಾ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದ್ದು, ರಾಹುಲ್ ಪಡೆ 5 ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಕೆಕೆಆರ್ 6 ಪಂದ್ಯಗಳನ್ನು ಗೆದ್ದು, 4ನೇ ಸ್ಥಾನದಲ್ಲಿದೆ.

ಎರಡೂ ತಂಡಗಳು ನಾಕ್ ಔಟ್ ಹಂತಕ್ಕೆ ಅರ್ಹತೆ ಪಡೆಯುವ ತವಕದಲ್ಲಿವೆ.

Edited By : Nirmala Aralikatti
PublicNext

PublicNext

26/10/2020 07:33 pm

Cinque Terre

61.58 K

Cinque Terre

21

ಸಂಬಂಧಿತ ಸುದ್ದಿ