ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020- MI vs RR: ರಾಜಸ್ಥಾನ್‌ಗೆ ನಿರ್ಣಾಯಕ ಪಂದ್ಯ

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಜಸ್ಥಾನ್ ರಾಯಲ್ಸ್‌ ಕಾದಾಡಲಿದೆ.

ರಾಜಸ್ಥಾನ್ ತಂಡವು ಈ ಆವೃತ್ತಿಯಲ್ಲಿ ಉಳಿಯಬೇಕಿದ್ದರೆ ಭಾನುವಾರ ಅನುಧಾನಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲ್ಲಲೇಬೇಕಿದೆ. ಸದ್ಯ 11 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿರುವ ರಾಜಸ್ಥಾನ್ 8 ಅಂಕಗಳಿಸಿ 7ನೇ ಸ್ಥಾನದಲ್ಲಿದೆ. ಹೀಗಾಗಿ ಮುಂಬೈ ಸೇರಿದಂತೆ ನಂತರದ ಎಲ್ಲಾ ಪಂದ್ಯಗಳಲ್ಲೂ ಸ್ಟೀವ್ ಸ್ಮಿತ್ ನೇತೃತ್ವದ ಪಡೆ ಗೆದ್ದರೆ ಮಾತ್ರ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ.

ಇತ್ತ ಮುಂಬೈ ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ರಾಜಸ್ಥಾನ್ ವಿರುದ್ಧ ಗೆದ್ದು ಪ್ಲೇ ಆಫ್‌ ಎಂಟ್ರಿ ಕೊಡುವ ಉತ್ಸಾಹದಲ್ಲಿದೆ.

ಸಂಭವನೀಯ ಆಟಗಾರರು:

ರಾಜಸ್ಥಾನ ರಾಯಲ್ಸ್: ರಾಬಿನ್ ಉತ್ತಪ್ಪ. ಬೆನ್ ಸ್ಟೋಕ್ಸ್‌, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್‌, ಸ್ಟೀವ್ ಸ್ಮಿತ್‌ (ನಾಯಕ), ರಿಯಾನ್ ಪರಾಗ್‌, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್‌, ಶ್ರೇಯಸ್ ಗೋಪಾಲ್‌, ಅಂಕಿತ್ ರಜಪೂತ್‌, ಕಾರ್ತಿಕ್‌ ತ್ಯಾಗಿ.

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿಕಾಕ್‌,‌ ರೋಹಿತ್‌ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ‌, ಕೀರನ್ ಪೊಲ್ಲಾರ್ಡ್‌, ಕೃನಾಲ್ ಪಾಂಡ್ಯ‌, ನೇಥನ್ ಕಲ್ಟರ್‌-ನೈಲ್‌, ರಾಹುಲ್ ಚಹರ್‌, ಟ್ರೆಂಟ್ ಬೌಲ್ಟ್‌, ಜಸ್ಪ್ರೀತ್ ಬುಮ್ರಾ.

Edited By : Vijay Kumar
PublicNext

PublicNext

25/10/2020 02:26 pm

Cinque Terre

40.83 K

Cinque Terre

11

ಸಂಬಂಧಿತ ಸುದ್ದಿ