ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ಕೈ ಹಿಡಿದ ಮ್ಯಾಕ್ಸ್‌ವೆಲ್, ಪೂರನ್- ಡೆಲ್ಲಿ ವಿರುದ್ಧ 5 ವಿಕೆಟ್‌ಗಳ ಗೆಲುವು

ದುಬೈ: ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ನಿಕೋಲಸ್ ಪೂರನ್ ಅದ್ಬುತ ಜೊತೆಯಾಟದಿಂದ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್​ನ 38ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಡೆಲ್ಲಿ ನೀಡಿದ್ದ 165 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡವು 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿ ಗೆಲುವು ದಾಖಲಿಸಿದೆ.

ಪಂಜಾಬ್ ಪರನಿಕೋಲಸ್ ಪೂರನ್ 53 ರನ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 32 ರನ್ ಚಚ್ಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಕೆ.ಎಲ್.ರಾಹುಲ್ 15 ರನ್, ಮಾಯಾಂಕ್ ಅಗರ್ವಾಲ್ 5 ರನ್, ಕ್ರಿಸ್ ಗೇಲ್ 29 ರನ್, ಕೊನೆಯಲ್ಲಿ ದೀಪಕ್ ಹೂಡ ಅಜೇಯ 15 ರನ್ ಹಾಗೂ ಜೇಮ್ಸ್ ನೀಶಮ್ 10 ರನ್‌ ಬಾರಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡವು 5 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತ್ತು. ತಂಡದ ಪರ ಶಿಖರ್ ಧವನ್ ಅಜೇಯ 106 ರನ್ (61 ಎಸೆತ, 12 ಬೌಂಡರಿ, 3 ಸಿಕ್ಸರ್), ಪೃಥ್ವಿ ಶಾ (7 ರನ್) , ಶ್ರೇಯಸ್ ಅಯ್ಯರ್ (14 ರನ್), ರಿಷಬ್ ಪಂತ್ (14 ರನ್), ಮಾರ್ಕಸ್ ಸ್ಟೊಯಿನಿಸ್ ಹಾಗೂ ಶಿಮ್ರೋನ್ ಹೆಟ್ಮೇರ್ ( 10 ರನ್) ಗಳಿಸಿದ್ದರು.

Edited By : Vijay Kumar
PublicNext

PublicNext

20/10/2020 11:04 pm

Cinque Terre

69.29 K

Cinque Terre

11

ಸಂಬಂಧಿತ ಸುದ್ದಿ