ಐಪಿಎಲ್ನ 33ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಕಂಡಿದೆ.
ಎಬಿ ಡಿ ವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇತ್ತ ಆರ್ಆರ್ ಟೂರ್ನಿಯಲ್ಲಿ 6ನೇ ಸೋಲುಕಂಡು ಪ್ಲೇ ಆಫ್ ಹಾದಿಯನ್ನ ಇನ್ನಷ್ಟು ಕಠಿಣಗೊಳಿಸಿದೆ.
ಆರ್ ಆರ್ ನೀಡಿದ್ದ 178 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಆರ್ ಸಿಬಿ ಓಪನರ್ ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್ ಗೆ 23 ರನ್ ನೀಡಿದರು.
ಫಿಂಚ್ ಕೇವಲ 14 ರನ್ ಗೆ ನಿರ್ಗಮಿಸಿದರು. ಬಳಿಕ ಪಡಿಕ್ಕಲ್-ಕೊಹ್ಲಿ 63 ಎಸೆತಗಳಲ್ಲಿ 79 ರನ್ ಗಳಿಸಿದರು.
ಪಡಿಕ್ಕಲ್ 37 ಎಸೆತಗಳಲ್ಲಿ 35 ರನ್ ಗಳಿಸಿ ಔಟ್ ಆದರೆ, ಕೊಹ್ಲಿ 32 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 43 ರನ್ ಗೆ ಔಟ್ ಆದರು.
ಬಳಿಕ ಎಬಿ ಡಿವಿಲಿಯರ್ಸ್ ಜೊತೆಯಾದ ಗುರುಕೀರತ್ ಮನ್ ಸಿಂಗ್ ಗೆಲುವಿಗಾಗಿ ಹೋರಾಟ ನಡೆಸಿದರು.
19ನೇ ಓವರ್ ನಲ್ಲಿ ಎಬಿಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಸಿಕ್ಸರ್ ಗಳ ಮಳೆ ಗೈದು ಅಭಿಮಾನಿಗಳನ್ನು ರಂಜಿಸಿದರು.
ಈ ಓವರ್ ನಲ್ಲಿ 25 ರನ್ ಬಂತು. ಹೀಗಾಗಿ ಕೊನೆಯ ಓವರ್ ನಲ್ಲಿ ಆರ್ಸಿಬಿಗೆ ಗೆಲ್ಲಲು 10 ರನ್ ಗಳ ಅವಶ್ಯಕತೆಯಿತ್ತು.
ಎಬಿಡಿ ಬ್ಯಾಟಿಂಗ್ ನಲ್ಲಿ ಆರ್ ಸಿಬಿ 19.4 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು.
ಡಿವಿಲಿಯರ್ಸ್ ಕೇವಲ 22 ಎಸೆತಗಳಲ್ಲಿ 1 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 55 ರನ್ ಪಡೆದರು.
ಗುರುಕೀರತ್ ಅಜೇಯ 19 ರನ್ ಗಳಿಸಿದರು. ಆರ್ ಆರ್ ಪರ ಕಾರ್ತಿಕ್ ತ್ಯಾಗಿ, ರಾಹುಕ್ ತೇವಾಟಿಯ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
PublicNext
17/10/2020 07:14 pm