ದುಬೈ: ಐಪಿಎಲ್-13ನೇ ಆವೃತ್ತಿಯು ಈಗಾಗಲೇ ಅರ್ಧದಾರಿ ಕ್ರಮಿಸಿದ್ದು, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳು ಪಂದ್ಯಗಳನ್ನು ಆಡಿ ತಲಾ 10 ಅಂಕಗಳನ್ನು ಹೊಂದಿವೆ. ಆದರೆ ನೆಟ್ ರನ್ ರೇಟ್‌ನಿಂದಾಗಿ ಮುಂಬೈ ತಂಡವು ಅಗ್ರಸ್ಥಾನದಲ್ಲಿದ್ದರೆ, ಡೆಲ್ಲಿ ಎರಡನೇ ಸ್ಥಾನ ಮತ್ತು ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಫೈನಲ್ ತಲುಪಿದ್ದ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಏಳನೇ ಸ್ಥಾನದಲ್ಲಿದ್ದರೆ, 7 ಪಂದ್ಯಗಳನ್ನು ಆಡಿ ಕೇವಲ ಒಂದರಲ್ಲಿ ಗೆಲುವು ದಾಖಲಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಕೊನೆಯ (8ನೇ) ಸ್ಥಾನದಲ್ಲಿದೆ.
PublicNext
13/10/2020 07:44 am