ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್ಚರ್ ಯಾರ್ಕರಿಗೆ ಮುಂಕಾದ ರೈಸರ್ಸ್ – ಕನ್ನಡಿಗ ಮನೀಷ್ ಅರ್ಧಶತಕದಿಂದ ರಾಜಸ್ಥಾನಕ್ಕೆ 159 ರನ್‌ಗಳ ಗುರಿ

ದುಬೈ: ಕನ್ನಡಿಗ ಮನೀಷ್ ಪಾಂಡ್ಯ ಅರ್ಧಶತಕ ಹಾಗೂ ನಾಯಕ ಡೇವಿಡ್‌ ವಾರ್ನರ್ ಸಹಯಾದಿಂದ ಸನ್‍ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 159 ರನ್‌ಗಳ ಗುರಿ ನೀಡಿದೆ.

ಇಂದು ನಡೆಯುತ್ತಿರುವ ಐಪಿಎಲ್-2020ರ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್‌ ತಂಡವು ನಾಲ್ಕು ವಿಕೆಟ್‌ ನಷ್ಟಕ್ಕೆ 158 ರನ್‌ಗಳ ಸಾಧಾರಣ ಹೊತ್ತವನ್ನು ಪೇರಿಸಿದೆ. ಹೈದರಾಬಾದ್ ಪರ ಕನ್ನಡಿಗ ಮನೀಷ್ ಪಾಂಡ್ಯ 54 ರನ್ ಹಾಗೂ ಡೇವಿಡ್ ವಾರ್ನರ್ 48 ರನ್ ಗಳಿಸಿದರು.

ಮೊದಲ ಓವರಿನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳು ಹೈದರಾಬಾದ್ ತಂಡದ ಆಟಗಾರರ ಮೇಲೆ ಸವಾರಿ ಮಾಡಿದರು. ಪವರ್ ಪ್ಲೇನಲ್ಲಿ ಹೈದರಾಬಾದ್ ತಂಡದ ಬ್ಯಾಟ್ಸ್ ಮನ್‌ಗಳು ರನ್ ಕದಿಯುವಲ್ಲಿ ಕಷ್ಟಪಟ್ಟರು. ನಾಲ್ಕು ಓವರ್ ಬೌಲ್ ಮಾಡಿದ ಜೋಫ್ರಾ ಆರ್ಚರ್ ಒಂದು ವಿಕೆಟ್ ಪಡೆದು ಕೇವಲ 25 ರನ್ ನೀಡಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಜಯದೇವ್ ಉನಾದ್ಕಟ್ ಅವರು ನಾಲ್ಕು ಓವರಿನಲ್ಲಿ ಒಂದು ವಿಕೆಟ್ ಕಿತ್ತು 31 ರನ್ ನೀಡಿದರು. ಮನೀಶ್ ಪಾಂಡ್ಯ ಹಾಗೂ ಡೇವಿಡ್ ವಾರ್ನರ್ ಜೋಡಿಯು ಎರಡನೇ ವಿಕೆಟ್ ನಷ್ಟಕ್ಕೆ 73 ರನ್‌ಗಳ ಕೊಡುಗೆ ನೀಡಿತು.

ರಾಜಸ್ಥಾನ ಪರ ಅರ್ಚರ್ ಒಂದು ವಿಕೆಟ್‌ ಪಡೆದು ಕೇವಲ 25 ರನ್ ನೀಡಿ ಮಿಂಚಿದರು. ಉಳಿದಂತೆ ಕಾರ್ತಿಕ್ ತ್ಯಾಗಿ ಹಾಗೂ ಜಯದೇವ್ ಉನಾದ್ಕತ್ ತಲಾ ಒಂದು ವಿಕೆಟ್‌ ಪಡೆದು ತಂಡಕ್ಕೆ ಆಸರೆಯಾದರು.

Edited By : Vijay Kumar
PublicNext

PublicNext

11/10/2020 05:34 pm

Cinque Terre

72.06 K

Cinque Terre

7

ಸಂಬಂಧಿತ ಸುದ್ದಿ