ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂಡ ಸೋತರೂ ಮೈಲುಗಲ್ಲು ಬರೆದ ಪಂಜಾಬ್ ಬ್ಯಾಟ್ಸ್‌ಮನ್ ಪೂರನ್

ದುಬೈ: ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಗುರುವಾರ ನಡೆದ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ 69 ರನ್‌ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಪಂಜಾಬ್ ಪರ ಏಕಾಂಗಿಯಾಗಿ ಹೋರಾಡಿದ ನಿಕೋಲಸ್ ಪೂರನ್ ಮೈಲುಗಲ್ಲು ಬರೆದಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್‌ನ ನಿಕೋಲಸ್ ಪೂರನ್ ಗುರುವಾರ 17 ಎಸೆತಗಳಲ್ಲಿ 50 ರನ್ ಗಳಿಸಿ ಐಪಿಎಲ್ 2020ರ ವೇಗದ ಅರ್ಧಶತಕದ ಸಾಧನೆ ಮಾಡಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಅತಿ ವೇಗದ ಅರ್ಧಶತಕವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ ಗಳಿಸಿದ್ದರು.

ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಅರ್ಧಶತಕ ಪೂರೈಸಿದ ಏಳನೇ ಹಾಗೂ ಕಿಂಗ್ಸ್‌ ಇಲೆವೆನ್ ತಂಡದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪೂರನ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡಿಗ, ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಅಗ್ರಸ್ಥಾನದಲ್ಲಿದ್ದು, 2018ರಲ್ಲಿ ಅವರು ಕೇವಲ 14 ಎಸೆತಗಳನ್ನು ಎದುರಿಸಿ ಅರ್ಧಶತಕ (51 ರನ್) ಸಿಡಿಸಿದ್ದರು.

Edited By : Vijay Kumar
PublicNext

PublicNext

09/10/2020 07:50 am

Cinque Terre

69.69 K

Cinque Terre

2

ಸಂಬಂಧಿತ ಸುದ್ದಿ