ಶಿವಮೊಗ್ಗ : ಗಿಡ ನೆಟ್ಟರೆ ಮಳೆ ಬರುತ್ತದೆ. ಪರಿಸರ ಉಳಿಸಿದರೆ ಮಾತ್ರ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಹಾಗೂ ಪರಿಸರ ಪ್ರೇಮಿ ಶ್ರೀಮತಿ ತುಳಸಿಗೌಡ ಹೇಳಿದ್ದಾರೆ.
ಇಂದು ನಗರದ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ್ದಾರೆ. ನಾನು ಓದಿಲ್ಲ, ಭಾಷಣಕಾರಳೂ ಅಲ್ಲ. ನನಗೆ ದೇವಿ ವಿಗ್ರಹ ನೋಡಿ ತುಂಬಾ ಸಂತೋಷವಾಗಿದೆ. ಆ ಚಾಮುಂಡೇಶ್ವರಿ ನಾಡಿನ ಜನತೆಗೆ ಸಕಲ ಸೌಭಾಗ್ಯ ಕೊಡಲಿ ಎಂದು ಹಾರೈಸಿದರು.
ಇದಕ್ಕೂ ಮುನ್ನ ಬೆಳ್ಳಿ ಅಂಬಾರಿಯಲ್ಲಿ ನೂತನವಾಗಿ ನಿರ್ಮಿಸಿದ ಬಂಗಾರದ ಕಿರೀಟ ಹೊತ್ತ ದೇವಿ ಚಾಮುಂಡೇಶ್ವರಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳೊಂದಿಗೆ ತರಲಾಯಿತು. ಈ ವೇಳೆ ಪಾಲಿಕೆ ಸದಸ್ಯರು ಕಲಾತಂಡಗಳ ಸದ್ದಿಗೆ ಹೆಜ್ಜೆ ಹಾಕಿದರು.
PublicNext
27/09/2022 08:14 am