ಶಿವಮೊಗ್ಗ : ಭದ್ರಾವತಿ ನಗರಸಭೆಯ ಅಧ್ಯಕ್ಷೆ ಸ್ಥಾನ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಅನುಸುಧಾ ಮೋಹನ್ ಪಳನಿ ಅಧ್ಯಕ್ಷೆ ಯಾಗಿ ಚುನಾಯಿತರಾಗಿದ್ದಾರೆ. ಇಂದು ಅಧ್ಯಕ್ಷೆ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ನಿಂದ ಅನುಸುಧಾ ಮೋಹನ್, ಜೆ.ಡಿ.ಎಸ್. ನಿಂದ ವಿಜಯಮ್ಮ ಮತ್ತು ಬಿಜೆಪಿ ಯಿಂದ ಅನುಪಮ ಚನ್ನೇಶ್ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಒಟ್ಟು ಮೂವತ್ತಾರು ಮತಗಳಲ್ಲಿ 18 ನಗರಸಭಾ ಸದಸ್ಯರು ಒರ್ವ ಪಕ್ಷೇತರ ಸದಸ್ಯ ಮತ್ತು ಶಾಸಕರ ಮತ ಸೇರಿ ಒಟ್ಟು 20 ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನುಸುಧಾರವರಿಗೆ . ಜೆಡಿಎಸ್ ಪಕ್ಷದ ಅಭ್ಯರ್ಥಿ ವಿಜಯಮ್ಮರಿಗೆ 12 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಅನುಪಮ ಚನ್ನೇಶ್ ಗೆ 4 ಮತಗಳು ಚಲಾವಣೆಗೊಂಡವು ಕಡೆಯಲ್ಲಿ ಅನುಸುಧಾ ಮೋಹನ್ ವಿಜಯಿಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಸಂಗಮೇಶ್ವರ ಮುಂದಿನ ಎಂಟು ತಿಂಗಳು ಅನುಸುಧಾ ಮೋಹನ್ ಅಧ್ಯಕ್ಷೆ ಯಾಗಿರುವರು ಉಳಿದ ಹದಿನೈದು ತಿಂಗಳ ಅವಧಿಗೆ ಏಳು ತಿಂಗಳು ಶೃತಿ ವಸಂತ್, ಹಾಗು ಹಾಲಿ ಉಪಾಧ್ಯಕ್ಷ ಚನ್ನಪ್ಪ ರವರ ಅವಧಿಯ ಎರಡು ತಿಂಗಳ ನಂತರ ಉಪಾಧ್ಯಕ್ಷೆಯಾಗಿ ಸರ್ವಮಂಗಳಾ ಬಿಪಿ ಭೈರಪ್ಪ ಮತ್ತು ಸ್ಥಾಯಿ ಸಮಿತಿಹಾಲು ಅಧ್ಯಕ್ಷ ಸುದೀಪ್ ಕುಮಾರ್ ರವರ ಅವಧಿ ಮುಗಿದ ನಂತರ ಮೋಹನ್ ರವರನ್ನು ಅಯ್ಕೆ ಮಾಡಲಾಗುವುದು ಎಂದರು.
Kshetra Samachara
23/09/2022 10:18 pm