ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಗನಕ್ಕೆ ಏರಿದ ಪೆಟ್ರೋಲ್ ಬೆಲೆ, ಇ ವಾಹನಗಳಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಮನೆಯಿಂದ ಕಚೇರಿ, ಮಾರುಕಟ್ಟೆಗೆ ಓಡಾಡುವವರು ಇ-ವಾಹನಗಳತ್ತ ಹೆಚ್ಚು ಆಕರ್ಷಿತರಾಗಿದ್ದು, 100 ರೂ.ಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸುವ ಬದಲು 20-25 ರೂ.ನಲ್ಲಿ 80-100 ಕಿ.ಮೀ. ದೂರ ಕ್ರಮಿಸಬಹುದಾಗಿದೆ. ನಿರ್ವಹಣೆ ದೃಷ್ಟಿಯಿಂದಲೂ ಪೆಟ್ರೋಲ್ ವಾಹನಗಳಿಗಿಂತ ಅತ್ಯಂತ ಸರಳವಾದ ಇ- ಸ್ಕೂಟರ್‌ಗಳಿಗೆ ಜನರು ಮನ ಸೋಲುತ್ತಿದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಕನಿಷ್ಠ 8-12 ವಿವಿಧ ಮಾದರಿಯ ಸ್ಕೂಟರ್ ಲಭ್ಯವಿದ್ದು, 43 ಸಾವಿರದಿಂದ 1.40 ಲಕ್ಷ ವರೆಗೂ ಬೆಲೆ ಇದೆ. ಈ ಸ್ಕೂಟರ್‌ಗಳ ವೇಗವು 25 ಕಿ.ಮೀಗಿಂತ ಕಡಿಮೆಯಿರುವುದರಿಂದ ಆರ್ ಟಿಓ ನೋಂದಣಿ ಅಗತ್ಯವಿಲ್ಲ. ಹೆಲ್ಮೆೆಟ್ ಧಾರಣೆ ಕಡ್ಡಾಯವಲ್ಲ.

ಬೆಂಗಳೂರು ಪೂರ್ವ ಭಾಗದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 4,882 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ. ಎಲೆಕ್ಟಾನಿಕ್ ಸಿಟಿಯಲ್ಲಿ

3,812, ಕೋರಮಂಗಲದಲ್ಲಿ 1,869, ಕೆ.ಆರ್.ಪುರದಲ್ಲಿ 1,213, ರಾಜಾಜಿನಗರದಲ್ಲಿ 1,060, ಬೆಂಗಳೂರು ಉತ್ತರದ ಯಶವಂತ ಪುರದಲ್ಲಿ 966, ಜ್ಞಾನಭಾರತಿಯಲ್ಲಿ 297, ಯಲಹಂಕದಲ್ಲಿ 214 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿವೆ.

Edited By : Vijay Kumar
PublicNext

PublicNext

12/02/2021 09:36 pm

Cinque Terre

20.99 K

Cinque Terre

1

ಸಂಬಂಧಿತ ಸುದ್ದಿ