ವಾಟ್ಸ್ಆ್ಯಪ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್ ಜೊತೆಗೆ ಹಂಚಿಕೊಳ್ಳುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಈಗಾಗಲೇ ಚರ್ಚೆಯಾಗುತ್ತಿದೆ. ಉದ್ಯಮಿಗಳು, ಪ್ರಮುಖ ಟೆಕ್ ಕಂಪನಿಗಳು ಈಗ ವಾಟ್ಸ್‌ಆ್ಯಪ್‌ನಿಂದ ಖಾಸಗಿ ಮಾಹಿತಿ ಸುರಕ್ಷತೆ ಹುಡುಕುತ್ತ 'ಸಿಗ್ನಲ್' ಆ್ಯಪ್ ಕಡೆಗೆ ಹೊರಟಿದ್ದಾರೆ. ಬಹುತೇಕ ಬಳಕೆದಾರರು ವಾಟ್ಸ್‌ಆ್ಯಪ್ ಹೊಸ ನಿಯಮಗಳ ಬಗ್ಗೆ ಅಷ್ಟಾಗಿ ಗಮನ ಹರಿಸಿಲ್ಲ. ಕೆಲವು ಜನ ಈಗಾಗಲೇ ಟೆಲಿಗ್ರಾಂ ಹಾಗೂ ಸಿಗ್ನಲ್ ಆ್ಯಪ್ ಕಡೆಗೆ ಹೊರಳಿದ್ದಾರೆ.
ಇನ್ನಷ್ಟು ಮಂದಿ ವಾಟ್ಸ್‌ಆ್ಯಪ್‌ನಲ್ಲೇ ಇರುವುದೊ, ಬಿಡುವುದೊ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಸಿಗ್ನಲ್ ಆ್ಯಪ್ ಗೂಗಲ್ ಪ್ಲೇಸ್ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಟಾಪ್ 1ನೇ ಸ್ಥಾನಕ್ಕೇರಿದೆ. ಖಾಸಗಿ ಮಾಹಿತಿ ಸುರಕ್ಷತೆ ದೃಷ್ಟಿಯಿಂದ ಸಿಗ್ನಲ್ ಆ್ಯಪ್ ಬಳಸುವುದು ಸೂಕ್ತ ಎಂದು ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.
PublicNext
12/01/2021 03:33 pm