ಹೊಸದಿಲ್ಲಿ: ಆಧುನಿಕ ಜಗತ್ತಿನಲ್ಲಿ ಎಲ್ಲವೂ ಡಿಜಿಟಲೀಕರಣ ಕೈಯಲ್ಲಿ ಹಣ ಇಟ್ಟುಕೊಂಡು ಓಡಾಡುವವರು ವಿರಳ ಎಂದರೆ ಅತಿಶಯೋಕ್ತಿ ಆಗಲಾರದು.
2022-23ನೇ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವ ಡಿಜಿಟಲ್ ಕರೆನ್ಸಿ ಬಗ್ಗೆ ಎಲ್ಲರೂ ಅಲರ್ಟ್ ಆಗಿದ್ದಾರೆ. ಆದರಲ್ಲೂ ಇಲ್ಲೊಬ್ಬ ಭಿಕ್ಷುಕನಂತೂ ಸ್ಮಾರ್ಟ್ ಇಂಡಿಯಾ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾನೆ.
ಹೌದು ಬಿಹಾರದಲ್ಲಿ ಭಿಕ್ಷುಕನೊಬ್ಬ ತನ್ನ ಭಿಕ್ಷಾಟನೆಯ ವೃತ್ತಿಯನ್ನೇ ಡಿಜಿಟಲೀಕರಣ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ರಾಜು ಪ್ರಸಾದ್ ಎಂಬ ಹೆಸರಿನ ಈತ ತನ್ನನ್ನು ಲಾಲು ಪ್ರಸಾದ್ ಅವರ ಮಗ ಎಂದು ಹೇಳಿಕೊಳ್ಳುತ್ತಾನೆ ಜತೆಗೆ ಪ್ರಧಾನಿ ಮೋದಿಯ ಭಕ್ತ ಎಂದು ಬಣ್ಣಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ದೇಶದ ಮೊದಲ ಡಿಜಿಟಲ್ ಭಿಕ್ಷುಕ ಎಂದು ಸ್ವಯಂ ಘೋಷಣೆ ಸಹ ಮಾಡಿಕೊಂಡಿದ್ದಾರೆ.
ಬಿಹಾರದ ರೈಲು ನಿಲ್ದಾಣದಲ್ಲಿ ಈತ ಡಿಜಿಟಲ್ ಭಿಕ್ಷುಕ ಎಂದೇ ಫೇಮಸ್. ಕುತ್ತಿಗೆಗೆ ಗೂಗಲ್-ಪೇ ಮತ್ತು ಫೋನ್-ಪೇ ಇ-ಸ್ಕ್ಯಾನಿಂಗ್ ಹೊಂದಿರುವ ಫಲಕವನ್ನು ನೇತುಹಾಕಿಕೊಂಡು ಭಿಕ್ಷೆ ಬೇಡುತ್ತಾರೆ. ಕೈಯಲ್ಲಿ ಟ್ಯಾಬ್ ಇಟ್ಟುಕೊಂಡಿರುವ ಈತ ಡಿಜಿಟಲ್ ಭಿಕ್ಷಾಟನೆ ಮೂಲಕ ಸಂಚಲನ ಸೃಷ್ಠಿಸಿದ್ದಾನೆ.
ಚಿಲ್ಲರೆ ಇಲ್ಲ ಎನ್ನುವವರಿಗೆ ಕ್ಯುಆರ್ ಕೋಡ್ ಫಲಕವನ್ನು ಮುಂದೆ ಚಾಚಿ ಜಾಣ ಭಿಕ್ಷಾಟನೆ ಮಾಡುತ್ತಿದ್ದಾರೆ.
PublicNext
08/02/2022 09:58 pm