ನವದೆಹಲಿ : ಇದುವರೆಗೆ ಮುಂಬೈ-ಪುಣೆ-ಹೈದರಾಬಾದ್ ಗೆ ರೈಲು ಪ್ರಯಾಣ ಮಾಡಲು ಕನಿಷ್ಟ 13 ಗಂಟೆ ಸಮಯಬೇಕಾಗುತ್ತಿತ್ತು ಆದರೆ ಬುಲೆಟ್ ರೈಲಿನಲ್ಲಿ ಕೇವಲ 3.5 ಗಂಟೆಯಲ್ಲಿ ನಿಗದಿತ ಸ್ಥಳ ತಲುಪಬಹುದು.
ಇದರಿಂದಾಗಿ ಬರೋಬ್ಬರಿ 9.5 ಗಂಟೆ ಸಮಯ ಉಳಿತಾಯವಾಗಲಿದೆ. ಹೌದು ಅತೀ ವೇಗದ ಬುಲೆಟ್ ರೈಲು ಯೋಜನೆ ಕಾರ್ಯ ಆರಂಭಗೊಂಡಿದೆ.
ಮುಂಬೈ-ಹೈದರಾಬಾದ್ ರೈಲು 711 ಕಿಲೋಮೀಟರ್ ಅತೀ ದೊಡ್ಡ ಯೋಜನೆಯಾಗಿದೆ.
ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಯ ಭೂ ಸಮೀಕ್ಷೆ, ಬಿಡ್ಡಿಂಗ್ ಮತ್ತು ಯೋಜನೆಯ ಕಾರ್ಯಸಾಧ್ಯತೆ ನವೆಂಬರ್ 5 ರಿಂದ ಆರಂಭವಾಗುವ ನಿರೀಕ್ಷೆಯಿದೆ.
ಹೈದರಾಬಾದ್-ಪುಣೆ-ಮುಂಬೈ ರೈಲು ಯೋಜನೆಯು ಈ ವರ್ಷ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ(NHSRCL)ಕೈಗೆತ್ತಿಕೊಂಡ 7 ಬುಲೆಟ್ ರೈಲು ಟೆಂಡರ್ ಗಳ ಭಾಗವಾಗಿದೆ.
ಸಾಮಾನ್ಯ ರೈಲುಗಳು 80 ರಿಂದ 120 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಆದರೆ ಬುಲೆಟ್ ರೈಲು ಪ್ರತಿ ಗಂಟೆಗೆ 320 ಕಿ.ಮೀ ವೇಗದಲ್ಲಿ ಸಾಗಲಿದೆ.
ಬುಲೆಟ್ ರೈಲು ಯೋಜನೆ ಕಾಮಗಾರಿ ಬಿಡ್ ಮಾಡುವರಿಗಾಗಿ ನವೆಂಬರ್ 5 ರಂದು ಬೆಳಗ್ಗೆ 11 ಗಂಟೆ ವಿಡಿಯೋ ಕಾನ್ಫರೆನ್ಸ್ ಸಭೆ ಆಯೋಜಿಸಲಾಗಿದೆ.
PublicNext
03/11/2020 01:36 pm