ಮಂಡ್ಯ : ಕೆಲವೊಂದು ಸಂದರ್ಭಗಳಲ್ಲಿ ಕೋಡಿ ಮಠದ ಶ್ರೀಗಳು ಹೇಳಿರುವ ಭವಿಷ್ಯ ವಾಣಿ ಸತ್ಯವಾಗಿದೆ. ಸದ್ಯ ಇದೇ ಸ್ವಾಮಿ ಮತ್ತೊಂದು ಭವಿಷ್ಯ ನುಡಿದಿದ್ದು ಆ ಭವಿಷ್ಯ ನಿಜಕ್ಕೂ ಭಯಾನಕವಾಗಿದೆ.ಹೌದು ಸದ್ಯ ಕೋಡಿ ಶ್ರೀ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ ಇದರಿಂದ ಅನಾಹುತ ಸಂಭವಿಸಲಿದೆ. ದೇಶದಲ್ಲಿ ಸುನಾಮಿ ಬರುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ ಭೇಟಿ ನೀಡಿರುವ ಕೋಡಿ ಮಠದ ಶ್ರೀಗಳು ಭೂಮಿಯಿಂದ ಹೊಸ ವಿಷ ಜಂತುಗಳು ಉದ್ಭವಿಸಲಿವೆ. ಭೂಮಿಯೇ ಬಿರುಕು ಬಿಡಲಿದೆ. ಜನರು ಓಡಾಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ ಎಂದು ಭವಿಷ್ಯ ನುಡಿದ್ದಿದ್ದಾರೆ.
ಈ ಹಿಂದಿನ ನನ್ನ ಎಲ್ಲಾ ಮಾತುಗಳು ನಿಜವಾಗಿವೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ. ಇದಕ್ಕೆಲ್ಲಾ ಪರಿಹಾರ ದೇವರನ್ನು ಪೂಜಿಸುವುದು. ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ. ಯೋಗ್ಯ ಸಾಧುಗಳಿದ್ದಾರೆ, ಗದ್ದುಗೆಗಳಿವೆ, ಎಲ್ಲರೂ ಸೇರಿ ಪ್ರಾರ್ಥಿಸಿದರೆ ಜಗತ್ತು ಉಳಿಯುತ್ತದೆ. ಮಠದ ವಿರುದ್ಧ ಹಾಗೂ ಶರಣರ ವಿರುದ್ಧ ಆರೋಪ ವಿಚಾರವಾಗಿ ಕೋಡಿ ಶ್ರೀ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವು, ಮೂಢಂಗೆ ಗುರುತನವೂ ಸಿಕ್ಕಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿವೆ ಎಂದಿದ್ದಾರೆ.
PublicNext
09/09/2022 07:30 pm