ಗದಗ: ನಾಡಿನಲ್ಲಿ ಗಣೇಶನ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾನ ಮಾಡಿದ ಗಣಪತಿ ವಿಸರ್ಜನೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ನರಗುಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ನರಗುಂದ ಸಿಪಿಐ ಮಲ್ಲಯ್ಯ ಮಠಪತಿಯವರು ಡೊಳ್ಳು ಬಾರಿಸುವ ಮೂಲಕ ತಮ್ಮ ಕಲೆ ಪ್ರದರ್ಶನ ಮಾಡಿದ್ದರು. ಇನ್ನು ಕೆಲವು ಸಿಬ್ಬಂದಿ ಡೊಳ್ಳು ಬಾರಿಸುವ ವೇಳೆ ತಾಳ ಬಾರಿಸಿ ಸಾಥ್ ನೀಡಿದರು. ಜಾಂಜ್ ಸೌಂಡ್‌ಗೆ ಪೊಲೀಸ್ ಸಿಬ್ಬಂದಿ ಸಖತ್ ಸ್ಟೇಫ್ ಹಾಕಿದರು.
PublicNext
04/09/2022 07:29 pm