ಬೆಳಗಾವಿ: ಶಾಸಕ ಅನಿಲ್ ಬೆನಕೆ ಇಂದು ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳಿಗಳಿಗೆ ವೀರ ಸಾವರ್ಕರ್ ಅವರ ಭಾವಚಿತ್ರ ಹಾಗೂ ಟೀ ಶರ್ಟ್ ಗಳನ್ನು ವಿತರಿಸಿದರು.
ಶನಿವಾರ ಚವ್ಹಾಟ್ ಗಲ್ಲಿಯಲ್ಲಿ ಇರುವ ತಮ್ಮ ಕಚೇರಿ ಬಳಿ ವಿಘ್ನನಿವಾರಕನಿಗೆ ಪೂಜೆ ಸಲ್ಲಿಸಿದ ಶಾಸಕರು, 10 ಸಾವಿರ ಟೀ ಶರ್ಟ್ ಹಾಗೂ 200 ವೀರ ಸಾವರ್ಕರ್ ಭಾವಚಿತ್ರಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಅನಿಲ್, ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳಿಗೆ ಭೇಟಿ ನೀಡಿ ವೀರ ಸಾವರ್ಕರ್ ಅವರ ಭಾವಚಿತ್ರ ಹಾಗೂ ಟೀ ಶರ್ಟ್ ವಿತರಣೆ ಮಾಡಲಾಗುತ್ತಿದೆ. ಇಡೀ ದೇಶದಲ್ಲೇ ಮುಂಬೈ ಬಿಟ್ಟು ಅತೀ ವಿಜೃಂಭಣೆಯಿಂದ ಬೆಳಗಾವಿಯಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಬೆಳಗಾವಿಯಲ್ಲಿ ಪ್ರಪ್ರಥಮವಾಗಿ ಗಣೇಶ ಹಬ್ಬ ಆಚರಣೆಗೆ ತರಲಾಗಿದೆ. ಬೆಳಗಾವಿ ಗಣೇಶ ಹಬ್ಬಕ್ಕೆ 126 ವರ್ಷಗಳ ಭವ್ಯ ಇತಿಹಾಸವೇ ಇದೆ ಎಂದು ಮಾಹಿತಿ ನೀಡಿದರು.
ಶ್ರೀ ಗಣೇಶ ಮಂಡಳಿಗಳು ಭಾರತ ಮಾತೆಯ ಹೆಮ್ಮೆಯ ಪುತ್ರ ವೀರ ಸಾವರ್ಕರ್ ಅವರ ಭಾವಚಿತ್ರ ಇಡಲು ಯಾರ ಬಳಿಯೂ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಹಾಗೂ ವೀರ ರಾಣಿ ಚನ್ನಮ್ಮ ಅವರ ಭಾವಚಿತ್ರ ಇಡುತ್ತೇವೆ ಎಂದು ತಿಳಿಸಿದರು.
PublicNext
04/09/2022 11:04 am