ಗದಗ: ಸರ್ವ ಧರ್ಮಿಯರ ಗುರುವೆಂದೆ ಪ್ರಸಿದ್ಧಿ ಪಡೆದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ವರವಿ ಮೌನೇಶ್ವರರ ಜಾತ್ರಾ ಮಹೋತ್ಸವವು ಶ್ರಾವಣಮಾಸದ ಕೊನೆಯ ಸೋಮವಾರದಂದು ಸಾವಿರಾರು ಭಕ್ತ ಸಮೂಹದ ಮಧ್ಯ ಸಡಗರ ಸಂಭ್ರಮದಿಂದ ಜರುಗಿತು.
ಕಳೆದ ಎರಡ್ಮೂರು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ಜಾತ್ರಾ ಕಮಿಟಿಯು ಪ್ರಸಕ್ತ ವರ್ಷ ಅವುಗಳನ್ನೆಲ್ಲಾ ಬಗೆಹರಿಸಿಕೊಂಡು ಅದ್ಧೂರಿಯಾಗಿ ಜಾತ್ರೆ ನಡೆಸುವಂತೆ ಕ್ರಮ ವಹಿಸಿದ್ದು, ಭಕ್ತರಲ್ಲಿ ಹರ್ಷೋದ್ಘಾರವನ್ನುಂಟು ಮಾಡಿತ್ತು. ಸೋಮವಾರ ಸಂಜೆ ಸುಮಾರು 5 ಗಂಟೆಗೆ ರಥೋತ್ಸವ ಪ್ರಾರಂಭವಾಯಿತು. ಮೌನೇಶ್ವರರಿಗೆ ಜೈಕಾರ ಹಾಕುತ್ತಾ ತೇರು ಎಳೆದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನಾಶಿರ್ವಾದ ಪಡೆದು ಅವರ ಕೃಪೆಗೆ ಪಾತ್ರರಾದರು.
PublicNext
22/08/2022 09:03 pm