ಮಂತ್ರಾಲಯ : ನಿರಂತರ ಸುರಿದ ಮಳೆಯಿಂದ ರಾಜ್ಯದ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಇದಕ್ಕೆ ತುಂಗಭದ್ರೆಯೂ ಹೊರತಾಗಿಲ್ಲ. ತುಂಗಭದ್ರಾ ಆಣೆಕಟ್ಟಿನಿಂದ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಮಂತ್ರಾಲಯ ಬಳಿ ಈ ಮನೋಹರ ದೃಷ್ಯವನ್ನು ಕಾಣಬಹುದಾಗಿದೆ.
ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ತುಂಗಭದ್ರೆಯನ್ನು ಸ್ವಾಗತಿಸಿದರು.
ಆಗಸ್ಟ್ ೧೨ ರಿಂದ ೧೪ ರವರೆಗೆ ಮಂತ್ರಾಲಯದಲ್ಲಿ ಈ ಬಾರಿ ನಡೆಯಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ನಡೆಯಲಿದೆ. ಈ ಮೂರು ದಿನಗಳು ಬಹುತೇಕ ರಜೆಗಳು ಬರುತ್ತಿರುವುದರಿಂದ ಭಕ್ತರ ಸಾಗರವೇ ಹರಿದು ಬರಲಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ನೀರಿನ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸಲಾಗಿದೆ.
PublicNext
19/07/2022 09:46 am