ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೇ ಸರಳತೆಯ ಸಂತನೆ ನಮ್ಮನ್ನು ಹರಸಿ, ಉದ್ದರಿಸು

ಓಂ ಸಾಯಿನಾಥಾಯ ನಮಃ

ಶಿರಡಿಯ ಸಾಯಿ ಬಾಬಾರಿಗೆ ಜಗತ್ತಿನಾದ್ಯಂತ ಭಕ್ತಗಣವಿದೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸಹಾಯ ಮಾಡುತ್ತಾ, ತಾವೂ ಬೆಳೆದು ಇತರರನ್ನೂ ಬೆಳೆಸಬೇಕು ಎಂದು ಸಾರಿದವರು ಸಾಯಿ ಬಾಬಾ. ಧ್ಯಾನ ಹಾಗೂ ಆಧ್ಯಾತ್ಮದ ಶಕ್ತಿಯನ್ನು ಸಾರಿದ ಸಾಯಿಬಾಬಾ ಯಾವುದೇ ಧರ್ಮವನ್ನು ಪ್ರತಿಪಾದಿಸಲಿಲ್ಲ. ಬದಲಿಗೆ ದೇವರೊಬ್ಬನೇ, ಆತ ಸರ್ವಶಕ್ತ ಎಂದರು. ಸಾಯಿ ಬಾಬಾ ಭಕ್ತರು ಅವರ ಆದರ್ಶಗಳು, ಪಾಠಗಳಿಗೆ ಮಂತ್ರ ಮುಗ್ಧರಾಗಿದ್ದಾರೆ. ಇಂಥಾ ಈ ಬಾಬಾ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ.

ಸಾಯಿಬಾಬಾ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಅವರ ನಿಜ ನಾಮಧೇಯ ಖಂಡಿತಾ ಗೊತ್ತಿರಲಿಕ್ಕಿಲ್ಲ. ನಿಮಗಷ್ಟೇ ಅಲ್ಲ, ಯಾರಿಗೂ ಸಾಯಿ ಬಾಬಾ ನಿಜ ಹೆಸರು ತಿಳಿದಿಲ್ಲ. ಅವರ ಮೂಲ ಧರ್ಮವಾಗಲೀ, ಬದುಕಿನ ಮೊದಲ ವರ್ಷಗಳ ಬಗ್ಗೆಯಾಗಲೀ, ಮೂಲ ಹೆಸರಾಗಲೀ ತಿಳಿದವರು ಯಾರೂ ಇಲ್ಲ. ಸನ್ಯಾಸಿಯಾಗಿ ಶಿರಡಿಗೆ ಬಂದರು, ಶಿಷ್ಯವರ್ಗವನ್ನು ಗಳಿಸಿದರು. ಅವರ ಶಿಷ್ಯರು ಅವರನ್ನು ಸಾಯಿ ಬಾಬಾ ಎಂದರು. ಅವರ ಜೀವನದ ಹಿನ್ನೆಲೆ ತಿಳಿದಿಲ್ಲವಾದರೂ ಫಕೀರರೊಬ್ಬರು ತನ್ನ ಬೆಳೆಸಿದ್ದಾಗಿ ಸಾಯಿಬಾಬಾ ಹೇಳಿದ್ದಾರೆ.

Edited By :
PublicNext

PublicNext

07/07/2022 07:34 am

Cinque Terre

87.85 K

Cinque Terre

4