ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲೂರು ಚೆನ್ನಕೇಶವ ರಥೋತ್ಸವದ ಮುಂಚೆ ಕುರಾನ್ ಪಠಣ

ಬೇಲೂರು: ನಿಮ್ಗೆ ಇದು ಗೊತ್ತೇ ? ಬನ್ನಿ, ಹೇಳ್ತಿವಿ. ಬೇಲೂರಿನ ಚನ್ನಕೇಶವ ರಥೋತ್ಸವದ ಮೊದಲು ಇಲ್ಲಿ ಕುರಾನ್ ಪಠಣ ಆಗುತ್ತದೆ. ಇದಕ್ಕೆ ವಿರೋಧ ಬಂದಿರೋದು ಇದೆ. ಆದರೆ, ಮುಜ್ರಾಯಿ ಇಲಾಖೆ ಈ ಸಂಪ್ರದಾಯಕ್ಕೆ ಯಾವುದೇ ತೊಂದರೆ ಕೊಟ್ಟಿಲ್ಲ. ಅದಕ್ಕೇನೆ ಎಂದಿನಂತೆ ಈ ವರ್ಷದ ರಥೋತ್ಸವ ಮುಂಚೆ ಕುರಾನ್ ಪಠಣ ಆಗಿದೆ.

ಚನ್ನಕೇಶವ ರಥೋತ್ಸವದ ಮೊದಲು ವಾಡಿಕೆಯಂತೆ ಬೆಳಗ್ಗೆ 10.40 ಕ್ಕೆ ಖಾಜಿ ಸಾಬ್ ಕುರಾನ್ ಪಠಣ ಮಾಡಿದರು.ಆದರೆ, ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಿವಾದವೂ ಎದ್ದಿತ್ತು.

ಆದರೆ, ಹಿಂದೂ ಧಾರ್ಮಿಕ ಕಾಯ್ದೆ 2002ರ ಸೆಕ್ಷನ್ 58 ರ ಪ್ರಕಾರ ದೇಗುಲ ಧಾರ್ಮಿಕ ಆಚರಣೆ,ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಅಂತಲೇ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕುರಾನ್ ಪಠಣ ಸಂಪ್ರಧಾಯವನ್ನ ದೇಗುಲದ ಸಮಿತಿ ನಿರ್ಧರಿಸಿದೆ.

Edited By :
PublicNext

PublicNext

15/04/2022 04:55 pm

Cinque Terre

43.81 K

Cinque Terre

4