ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಆಗೋದಾದ್ರೆ ನಿಮ್ಮ ಜಾತಿ-ಧರ್ಮದವರನ್ನೇ ಆಗಿ: ಹಲ್ಲೆಗೊಳಗಾದ ಅಪೂರ್ವ ಮಾತು

ಗದಗ: ಮದುವೆ ಸಂಬಂಧ ಅಂತ ಬಂದಾಗ ನಿಮ್ಮ ಜಾತಿ ಅಥವಾ ಧರ್ಮದವರನ್ನೇ ಮದುವೆ ಆಗಿ. ಅದು ಹಿಂದೂ ಹೆಣ್ಣುಮಕ್ಕಳಿಗೆ ಸುರಕ್ಷಿತ. ಈ ವಿಚಾರದಲ್ಲಿ ಯಾರೂ ಕೂಡ ಪೋಷಕರ ನಿರ್ಧಾರ ಮೀರಬೇಡಿ. ಜೀವನದ ನಿರ್ಧಾರ ತೆಗೆದುಕೊಳ್ಳುವಾಗ ತಂದೆ-ತಾಯಿಯ ಅಭಿಪ್ರಾಯ ಕೇಳಿ ಎಂದು ಪತಿಯಿಂದ ಭೀಕರ ಹಲ್ಲೆಗೊಳಗಾದ ಅಪೂರ್ವ ಕುಲಕರ್ಣಿ ಹೇಳಿದ್ದಾರೆ.

ಪತಿ ರಜಾಕ್‌ನಿಂದ ಹಲ್ಲೆಗೊಳಗಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವ ಮದುವೆ ಆಗಿರದ ಯುವತಿಯರಿಗೆ ಈ ರೀತಿ ಸಲಹೆ ನೀಡಿದ್ದಾರೆ.

ನಿಮ್ಮ ಬದುಕಿನಲ್ಲಿ ಯಾವುದೇ ಸಣ್ಣ ಬದಲಾವಣೆ ಆದರೂ ಅದನ್ನು ಪೋಷಕರಿಗೆ ತಿಳಿಸಿ. ಅವರು ನಿಮ್ಮನ್ನು ಕಾಲೇಜು ಬಿಡಿಸುತ್ತಾರೆ, ಮನೆಯಲ್ಲಿ ಕೂರಿಸುತ್ತಾರೆ ಎಂಬುದನ್ನು ತಲೆಯಿಂದ ತಗೆದು ಹಾಕಿ. ಎಲ್ಲ ಪೋಷಕರು ಮಕ್ಕಳಿಗೆ ಒಳ್ಳೆಯದನ್ನೇ ಕೇಳುತ್ತಾರೆ. ಪೋಷಕರ ಮಾತಿನಂತೆ ನಡೆದುಕೊಳ್ಳದಿದ್ದರೆ ನನಗಾದ ಪರಿಸ್ಥಿತಿ ನಿಮಗೂ ಆಗುತ್ತದೆ. ನಾನು ಒಬ್ಬ ಹಿಂದೂ ಧರ್ಮದವಳಾಗಿ ಹೇಳ್ತಿದ್ದೀನಿ. ನನಗೆ ಬೇರೆ ಧರ್ಮದ ಬಗ್ಗೆ ದ್ವೇಷವಿಲ್ಲ. ಮದುವೆ ಅಂತ ಬಂದಾಗ ನಮ್ಮ ಧರ್ಮದವರನ್ನೇ ಆಗಬೇಕು. ಹಿಂದೂ ಧರ್ಮ ಉಳಿಯಬೇಕಾದರೆ ನಮ್ಮವರನ್ನೇ ನಾವು ಮದುವೆ ಆಗಬೇಕು ಎಂದು ಅಪೂರ್ವಾ ಕುಲಕರ್ಣಿ ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ.

ಗದಗ ನಗರದ ಲಯನ್ಸ್ ಶಾಲೆ ಆವರಣದಲ್ಲಿ ಸ್ಕೂಟಿ ಓಡಿಸೋದನ್ನು ಕಲಿಯುವ ವೇಳೆ ಪತಿ ಇಜಾಜ್, ಪತ್ನಿ ಅಪೂರ್ವ ಮೇಲೆ ಮಚ್ಚಿನಿಂದ 23 ಬಾರಿ ಹೊಡೆದಿದ್ದ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಪೂರ್ವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೈದ ಇಜಾಜ್ ಈಗ ಜೈಲುಪಾಲಾಗಿದ್ದಾ‌‌ನೆ. ಇದು ಲವ್ ಜಿಹಾದ್ ಪ್ರಕರಣ ಎಂಬ ಆರೋಪ ಇದೆ.

Edited By : Shivu K
PublicNext

PublicNext

16/03/2022 12:19 pm

Cinque Terre

46.05 K

Cinque Terre

40