ಬಾಗಲಕೋಟೆ: ಭಾರೀ ಕುತೂಹಲ ಮೂಡಿಸಿದ್ದಂತ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮೂರನೇ ಪೀಠದ ಮೊದಲ ಜಗದ್ಗುರುಗಳ ಪೀಠಾರೋಹಣ ಸಮಾರಂಭ, ಇಂದು ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ನಡೆಯಿತು. ಈ ಮೂಲಕ ರಾಜ್ಯದಲ್ಲಿ ಪಂಚಮಸಾಲಿ ಮೂರನೇ ಪೀಠಕ್ಕೆ ಚಾಲನೆ ದೊರೆತಿದೆ.
'ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹರಿಹರ ಪೀಠವೇ ಮೂಲಪೀಠ. ಆಲಗೂರಿನ ಮೂರನೇ ಪೀಠ ಅದರ ಭಾಗವಾಗಿ ಕೆಲಸ ಮಾಡಲಿದೆ' ಎಂದು ಡಾ.ಮಹಾದೇವ ಶಿವಾಚಾರ್ಯ ಪಟ್ಟಾಧಿಕಾರದ ನಂತರ ಅವರಿಗೆ ಬಿನ್ನವತ್ತಳೆ ಅರ್ಪಣೆ ವೇಳೆ ಸಂಘಟಕರು ಘೋಷಣೆ ಮಾಡಿದರು.
ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠದಲ್ಲಿ ನಡೆದ ನೂತನ ಶ್ರೀಗಳ ಪೀಠಾರೋಹಣ ವೇಳೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಡಾ.ಮಹಾದೇವ ಶಿವಾಚಾರ್ಯ ಶ್ರೀಗಳಿಗೆ ರುದ್ರಾಕ್ಷಿ ಕಿರೀಟ ತೊಡಿಸಿದರು.
ಇದೇ ವೇಳೆ ಹರಿಹರ ವೀರಶೈವ ಪಂಚಮಸಾಲಿ ಪೀಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ಸಿ.ಉಮಾಪತಿ ಹಾಗೂ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ ಅವರನ್ನು ಸಂಘಟಕರು ಸನ್ಮಾನಿಸಿದರು.
PublicNext
13/02/2022 04:45 pm