ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮ ಮೀರಿದ ಮಧುರ ಗಾನ: ಮತ್ತೊಮ್ಮೆಜನಮನ ತಟ್ಟಿದ 'ಮಹಾಭಾರತ' ಟೈಟಲ್ ಹಾಡು!

ಮುಸ್ಲಿಂ ಹಿರಿಯ ವ್ಯಕ್ತಿಯೊಬ್ಬರು ಹಿಂದಿ ಧಾರಾವಾಹಿ 'ಮಹಾಭಾರತ'ದ ಟೈಟಲ್ ಹಾಡನ್ನು ರಾಗ- ತಾಳಬದ್ಧವಾಗಿ ಹಾಡುತ್ತಿರುವ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಸ್ಲಿಂ ಧರ್ಮದವರಾಗಿರುವ ಅವರ ಅಚ್ಚುಮೆಚ್ಚಿನ ಗೀತೆ ಇದೆಂದು ಎನಿಸುವಷ್ಟು ಅವರು ಸುಮಧುರವಾಗಿ ಹಾಡಿದ್ದಾರೆ. ತನ್ಮಯತೆ, ಖುಷಿಯಿಂದ ಸಂಭ್ರಮಿಸಿ ಹಾಡುವುದನ್ನು ವೀಡಿಯೊದಲ್ಲಿ ಗಮನಿಸಬಹುದು. ಜೊತೆಗೆ ಅವರ 'ಶಂಖನಾದ' ವೂ ಹುಬ್ಬೇರಿಸುವಂತಿದೆ!

ಈ ವೀಡಿಯೊವನ್ನು ಭಾರತ ಚುನಾವಣಾ ಆಯೋಗದ ಮಾಜಿ ಆಯುಕ್ತ ಡಾ.ಎಸ್. ವೈ. ಖುರೇಷಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು, ಖುಷಿ ವ್ಯಕ್ತ ಪಡಿಸಿದ್ದಾರೆ.

ಭಾರತದ ಸಾಂಸ್ಕೃತಿಕ ವೈವಿಧ್ಯತೆ, ಕೋಮು ಸೌಹಾರ್ದತೆ- ಸಾಮರಸ್ಯಕ್ಕೆ ನಿದರ್ಶನ ಎಂಬಂತಿರುವ ಈ ವೀಡಿಯೊ ಹಲವು ಮಂದಿಯ ಮನ ಗೆದ್ದಿದೆ.

Edited By : Shivu K
PublicNext

PublicNext

24/09/2021 10:27 am

Cinque Terre

111.54 K

Cinque Terre

16