ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಕಪುರ : ಕ್ಷೇತ್ರದ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ; ಶಾಸಕಿ ಅನಿತಾ ಕುಮಾರಸ್ವಾಮಿ

ಕನಕಪುರ : ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳು ಸಮಾರೋಪಾದಿಯಲ್ಲಿ ಸಾಗಿದ್ದು, ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ದೊಡ್ಡಮುದವಾಡಿ ಗ್ರಾಮಪಂಚಾಯಿತಿ ಆವರಣದಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ ಸರಕಾರದ ಸೇವೆಗಳನ್ನು ಜನರಿಗೆ ತಲುಪಿಸಿ ಜನರು ಪಿಂಚಣಿಗಾಗಿ ಕಚೇರಿಗಳಿಗೆ ಅಲೆಯದಂತೆ ತಡೆಯಲು ಪಿಂಚಣಿ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕ್ಷೇತ್ರದಾದ್ಯಂತ ಜನರು ಪಿಂಚಣಿ ಸಮಸ್ಯೆಯ ಬಗ್ಗೆ ದೂರುಗಳನ್ನು ಹೇಳುತ್ತಿದ್ದರು ಅಲೆದು ಅಲೆದು ಸಾಕಾಗಿದೆ ಎಂದು ದೂರು ಹೇಳುತ್ತಿದ್ದರು, ಅಲ್ಲದೆ ಮಧ್ಯವರ್ತಿಗಳ ಹಾವಳಿಯ ಬಗ್ಗೆಯೂ ಜನರು ಗಮನ ಸೆಳೆದಿದ್ದರು ಎಂದರು.

ಉಪ ತಹಸೀಲ್ದಾರ್ ಮನೋಹರ್, ಆರ್ ಐ ಬಸವಣ್ಣ ಗ್ರಾಪಂ ಪಿಡಿಒ ಮಹದೇವ್, ವಿ ಎಸ್ ಎಸ್ ಎ ನ್ ನಿರ್ದೇಶಕ ನಾಗರಾಜು, ಮುಖಂಡರಾದ ಶಿಲ್ಪಾ ಶಿವಾನಂದ್, ಶೋಭಾಸಿದ್ದಪ್ಪ ಅಂಗರಹಳ್ಳಿ ರಮೇಶ್ , ಕೊಳ್ಳಿಗನಹಳ್ಳಿ ಪ್ರದೀಪ್, , ಎಚ್. ಪ್ರದೀಪ್, ಕೋಟೆ ರಾಜು, ಗ್ರಾಮ ಲೆಕ್ಕಧಿಕಾರಿ ಮಂಜುನಾಥ್ ಇತರರು ಇದ್ದರು.

ಎಲ್.ಜಿ.ಜಯರಾಮನಾಯಕ್ ಪಬ್ಲಿಕ್ ನೆಕ್ಸ್ಟ್

Edited By :
Kshetra Samachara

Kshetra Samachara

13/10/2022 09:00 pm

Cinque Terre

9.78 K

Cinque Terre

0