ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ನೇಕಾರರು ತಮ್ಮ ಕುಲ ಕಸುಬು ಮುಂದುವರೆಸಿಕೊಂಡು ಹೋಗಬೇಕು; ಸಂಸದರ ಸಲಹೆ

ರಾಯಚೂರು : ಆಧುನೀಕರಣದಲ್ಲಿ ನೇಕಾರರ ವೃತ್ತಿ ಅಸ್ತಿತ್ವ ಕಳೆದುಕೊಳ್ಳುವ ಹಂಚಿಗೆ ಬಂದು ನಿಲ್ಲುತ್ತಿದೆ. ಕುಲ ಕಸುಬು ಮುಂದುವರೆಸಿಕೊಂಡು ಹೋಗುವ ನೇಕಾರರಿಗೆ ಹೆಚ್ಚಿನ ಆದ್ಯತೆ ನೀಡುವ ಸರ್ಕಾರ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ನೇಕಾರರ ಸಮಾವೇಶ,ಪ್ರತಿಭಾ ಪುರಸ್ಕಾರ ಮತ್ತು ಸಮಾಜದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಾಗರೀಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,

ಕರಕುಶಲ ಕರ್ಮಿಗಳಿಗೆ ಉದ್ಯೋಗ ಸೌಕರ್ಯ ಹೆಚ್ಚಿಸುವ ಮೂಲಕ ಗ್ರಾಮೀಣ ಜೀವನ ಮತ್ತು ಪಾರಂಪರಿಕ ವೃತ್ತಿಯನ್ನು ಅಭಿವೃದ್ಧಿ ಪಡಿಸುವ ಮಹಾತ್ಮಗಾಂಧೀಜಿ ಅವರ ಕನಸಿಗೆ ಉತ್ತೇಜನ ನೀಡುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ಡಿ.ದೇವರಾಜು ಅರಸು ಅಧಿಕಾರಾವಧಿಯಲ್ಲಿ ನೇಕಾರರಿಗೆ ಅನೇಕ ಅನುಕೂಲ ಮಾಡಿಕೊಡಲಾಗಿದೆ. ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅನೇಕ ಸರ್ಕಾರ ಸೌಲಭ್ಯಗಳು ಸಿಗುವಂತೆ ಮಾಡಿದ್ದಾರೆ. ನೇಕಾರರ ಒಕ್ಕೂಟದಿಂದ ವಿಭಾಗೀಯ ಮಟ್ಟದ ಸಮಾವೇಶ ಮಾಡುವ ಮೂಲಕ ನೇಕಾರರನ್ನು ಒಗ್ಗೂಡಿಸಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು ಹೇಳಿದರು.

Edited By : Abhishek Kamoji
Kshetra Samachara

Kshetra Samachara

18/09/2022 04:33 pm

Cinque Terre

3.92 K

Cinque Terre

0