ರಾಯಚೂರು : ಸಿಂಧನೂರಿನ ಆರಾಧ್ಯದೈವ ಎಂದು ಕರೆಯುವ, ಸಿದ್ಧ ಪರ್ವತದಲ್ಲಿ ನೆಲೆಸಿರುವ ಅಂಬಾ ದೇವಿಗೆ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಹಸ್ರಾರ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನ ಪಡೆದ ಪುನೀತರಾದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಮಠದ ಅಂಬಾದೇವಿ ದೇವಸ್ಥಾನದಲ್ಲಿ ಇಂದು ವಿಜಯದಶಮಿ ನಿಮತ್ಯ ದೇವಿಗೆ ಬೆಳಗಿನ ಜಾವ ಪ್ರತಃ ಕಾಲದಿಂದ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಪೂಜೆಯ ನಂತರ ಭಕ್ತರುಗಳಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದರು. ಬೆಳಗಿನಿಂದಲೇ ದೇವಿಗೆ ವಿಶೇಷ ಪೂಜೆ ಕುಂಕುಮಾರ್ಚನೆ, ಅಭಿಷೇಕಗಳನ್ನು ಮಾಡುವ ಮುಖಾಂತರ ವಿಜಯದಶಮಿ ದಸರಾ ಹಬ್ಬವನ್ನು ಆಚರಿಸಿದರು.
PublicNext
05/10/2022 05:24 pm