ರಾಯಚೂರು: ಎಡದಂಡೆ ವಿತರಣಾ ಕಾಲುವೆಗೆ ಈಜಲು ಹೋಗಿದ್ದ ನಾಲ್ವರಲ್ಲಿ ಇಬ್ಬರೂ ಮೃತಪಟ್ಟ ಘಟನೆ ಕಲ್ಮಲಾ ಹತ್ತಿರದ ಎಡದಂಡೆ 98 ವಿತರಣಾ ಕಾಲುವೆಯಲ್ಲಿ ಘಟನೆ ಜರುಗಿದೆ.
ತಾಲ್ಲೂಕಿನ ಕಲ್ಮಲಾ ಗ್ರಾಮದ ಬಳಿ ಘಟನೆ ಜರುಗಿದೆ. ಮೃತ ಇಬ್ಬರು ವಿದ್ಯಾರ್ಥಿಗಳು ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಭಾನುವಾರದ ಹಿನ್ನೆಲೆಯಲ್ಲಿ ತರುಣ್, ವೈಭವ್, ಸುಜೀತ್, ಚಂದ್ರಶೇಖರ ಈಜಲು ಎಡದಂಡೆ ಕಾಲುವೆಗೆ ತೆರಳಿದ್ದರು. ಕಾಲುವೆಯಲ್ಲಿ ಈಜುತ್ತಿರುವಾಗ ವೈಭವ್(17) ಮತ್ತು ಸುಜೀತ್(17) ಕಾಣೆಯಾಗಿದ್ದರು. ರಾತ್ರಿಯೆಲ್ಲ ಇವರನ್ನು ಶೋಧ ಮಾಡಲಾಯಿತು. ಆದರೆ ಕಾಲುವೆಯಲ್ಲಿ ನೀರಿನ ಮಟ್ಟ ಅಧಿಕವಾಗಿರುವುದರಿಂದ ಶವಗಳ ಪತ್ತೆ ಸಾಧ್ಯವಾಗಿರಲಿಲ್ಲ.
ಬೆಳಗಿನಜಾವ ಕಾಲುವೆ ನೀರು ಕಡಿತಗೊಳಿಸಿದ ನಂತರ ಎರಡು ಶವಗಳು ಪತ್ತೆಯಾಗಿವೆ. ವೈಭವ್ ಮತ್ತು ಸುಜೀತ್ ಇಬ್ಬರು ದ್ವಿತೀಯ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳಾಗಿದ್ದರು. ಸ್ಥಳಕ್ಕೆ ತಹಶೀಲ್ದಾರ್ ರಾಜಶೇಖರ ಭೇಟಿ ನೀಡಿ, ಪಂಚನಾಮೆ ಮಾಡಿ, ಎರಡು ಶವಗಳನ್ನು ಜಿಲ್ಲಾಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರಲ್ಲಿ ಬಿಜೆಪಿ ಮುಖಂಡರಾದ ಬಂಡೇಶ ವಲ್ಕಂದಿನ್ನಿ ಅವರ ಸಂಬಂಧಿಯೊಬ್ಬರಾಗಿದ್ದಾರೆ.
PublicNext
19/09/2022 06:31 pm