", "articleSection": "Agriculture", "image": { "@type": "ImageObject", "url": "https://prod.cdn.publicnext.com/s3fs-public/52563-1731142887-19c92703-f4bf-49bb-aee4-6df984968d4d.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshSarivar" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿರವಾರ : ಬಿಳಿ ಬಂಗಾರ ಎಂದೆ ಖ್ಯಾತಿ ಹೊಂದಿದ ಹತ್ತಿ ಬೆಳೆ ಬೆಳೆದ ರೈತರಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೆ ಇದ್ದು ರೈತನ ಗೋಳು...Read more" } ", "keywords": "Who will listen to the farmer who raised the cotton crop?,Raichur,Agriculture", "url": "https://publicnext.com/article/nid/Raichur/Agriculture" } ಹತ್ತಿ ಬೆಳೆ ಬೆಳೆದ ರೈತನ ಗೋಳು ಕೇಳುವವರು ಯಾರು?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ತಿ ಬೆಳೆ ಬೆಳೆದ ರೈತನ ಗೋಳು ಕೇಳುವವರು ಯಾರು?

ಸಿರವಾರ : ಬಿಳಿ ಬಂಗಾರ ಎಂದೆ ಖ್ಯಾತಿ ಹೊಂದಿದ ಹತ್ತಿ ಬೆಳೆ ಬೆಳೆದ ರೈತರಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೆ ಇದ್ದು ರೈತನ ಗೋಳು ಕೇಳುವವರು ಯಾರು ಎನ್ನುವಂತಾಗಿದೆ. ಕಳೆ‍ದ ವರ್ಷ ಹತ್ತಿಗೆ ಬಂಪರ್ ಬೆಲೆ ಸಿಕ್ಕಿರುವುದರಿಂದ ಈ ವರ್ಷವು ಉತ್ತಮ ಬೆಲೆ ಸಿಗುತ್ತದೆ ಎಂದು ಬಹುತೇಕ ರೈತರು ಹತ್ತಿಯನ್ನೇ ಬೆಳೆದಿದ್ದಾರೆ .ಆದರೆ ಪ್ರಸ್ತುತ ವರ್ಷ ಸೂಕ್ತ ಬೆಲೆ ಇಲ್ಲದೆ ರೈತನು ಕಂಗಾಲು ಆಗಿದ್ದಾನೆ.

ರೈತನ ತಾನು ಬೆಳೆದ ಬೆಳೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ವಿಘ್ನಗಳು ಬಂದೆ ಬರುತ್ತಿವೆ. ಆದರೆ ಈ ವರ್ಷ 6 ಸಾವಿರರಿಂದ 7200 ರೂಪಾಯಿ ಕ್ವಿಂಟಲ್ ಗೆ ‌ಸಿಗುತ್ತಿದೆ. ಹತ್ತಿ ಬಿಡುಸುವುದಕ್ಕೆ ಕೂಲಿ ಕಾರ್ಮಿಕರಿಗೆ ಕೆಜಿ ಹತ್ತಿಗೆ 14 ರೂಪಾಯಿ ನೀಡಬೇಕಾಗಿದೆ, ಒಂದು ವೇಳಿ ಕೂಲಿ ಲೆಕ್ಕಕ್ಕೆ ಕೆಲಸಕ್ಕೆ ಬಂದರೆ ಒಬ್ಬ ಕಾರ್ಮಿಕರಿಗೆ 350 ಕೂಲಿ ನೀಡಬೇಕು ಆದರೆ ಕೆಲಸ ಮಾತ್ರ ನಿದಾನ ಮಾಡುವುದರಿಂದ ಕೆಜಿ ಲೆಕ್ಕದಲ್ಲಿ ಬಿಡಿಸುವುದಕ್ಕೆ ನೀಡುವುದು ಉತ್ತಮ ಎನ್ನುವಂತಾಗಿದೆ.

ಇನ್ನೂ ಕ್ರಿಮಿನಾಶಕ, ಹೊಲದ ಲೀಜ್ ಎಲ್ಲಾವು ಲೆಕ್ಕ ಹಾಕಿದರೆ ಈ ಬೆಲೆಗೆ ರೈತನಿಗೆ ಪುನಃ ಸಾಲದ ಸುಳಿಗೆ ಸಿಲಿಕಿಕೊಳ್ಳುವಂತಾಗಿದೆ. ಈಗಾಗಲೇ ಹತ್ತಿ ಬಿಡಿಸುವುದಕ್ಕೆ ಕೂಲಿ ಕಾರ್ಮಿಕರ ಕೊರತೆ ಇದೆ. ಅದೇ ರೀತಿಯಾಗಿ ಕಳೆದ ತಿಂಗಳ ಸತತ 15 ದಿನ ಮಳೆ ಸುರಿದ ಕಾರಣ ಹತ್ತಿ ಗಿಡದಲ್ಲೆ ನೆನದ ಕಾರಣ ದರ ಸಹ ಕಡಿಮೆಯಾಗಿದೆ. ಇನ್ನೂ ಕೂಲಿ ಕಾರ್ಮಿಕರು ಸಿಗದ ಕಾರಣ ಕೆಲ ಭಾಗದಲ್ಲಿ ಹತ್ತಿ ಗಿಡದಲ್ಲೆ ಸಸಿ ಬಂದಿದ್ದು ಉದಾಹರಣೆಗೆ ಇದೆ.

ಖರೀದಿ ಕೇಂದ್ರಕ್ಕೆ ಒತ್ತಾಯ : ಏಷ್ಯಾ ಖಂಡದಲ್ಲಿ ಹೆಚ್ಚು ಹತ್ತಿ ಬೆಳೆಯ ಜಿಲ್ಲೆ ಎಂಬ ಹಿರಿಮೆ ಜಿಲ್ಲೆಗೆ ಇದೆ. ಜಿಲ್ಲೆಯ ಬಹುತೇಕ ತಾಲೂಕು ವ್ಯಾಪ್ತಿಯಲ್ಲಿ ಹತ್ತಿ ಬೆಳೆಯನ್ನು ಬೆಳೆಯಲಾಗುತ್ತಿದೆ ಆದರೆ ಎಲ್ಲಿಯೂ ಸರ್ಕಾರ ಹತ್ತಿ ಖರೀದಿ ಕೇಂದ್ರವನ್ನು ತೆರದಿಲ್ಲ, ಸರ್ಕಾರ ಬೆಂಬಲ ಬೆಲೆಯು ಘೋಷಣೆ ಮಾಡಿಲ್ಲ ಇದರಿಂದಾಗಿ ರೈತ ಸಂಪೂರ್ಣವಾಗಿ ನಷ್ಟದ ಭೀತಿ ಎದುರಾಗಿದೆ.

Edited By : Nirmala Aralikatti
Kshetra Samachara

Kshetra Samachara

09/11/2024 02:32 pm

Cinque Terre

79.06 K

Cinque Terre

0