ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಕಾಮಗಾರಿಗಳ ಹೆಸರಲ್ಲಿ ಭ್ರಷ್ಟಾಚಾರ?

ರಾಯಚೂರು : ಕಾಮಗಾರಿಗಳ ಹೆಸರಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಈ ಸಂಬಂಧ ಇಬ್ಬರು ಗ್ರಾಮ ಪಂಚಾಯತಿ ಸದಸ್ಯ ಸ್ಥಾನ ರಾಯಚೂರಿನಲ್ಲಿ ರದ್ದು ಮಾಡಲಾಗಿದೆ.

ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ 15 ನೇ ಹಣಕಾಸಿನ ಯೋಜನೆ ಮಾರ್ಗಸೂಚಿ ಉಲ್ಲಂಘಿಸಿ ಹಣ ದುರ್ಬಳಕೆ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ.

ಒಟ್ಟು 16 ಲಕ್ಷ 96 ಸಾವಿರ ಹಣ ದುರ್ಬಳಕೆ ಆರೋಪ ಇದ್ದು ಗ್ರಾಮ ಪಂಚಾಯತಿ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ. ಹಾಲಿ ಸದಸ್ಯೆ ಕಾವೇರಿ ಸದಸ್ಯತ್ವ ಹಾಲಿ ಅಧ್ಯಕ್ಷೆ ಈರಮ್ಮ ಸದಸ್ಯತ್ವ , ಹಾಗು ಅಧ್ಯಕ್ಷ ಸ್ಥಾನ ರದ್ದು ಮಾಡಿದ್ದುಮುಂದಿನ 6 ವರ್ಷಗಳವರೆಗೆ ಇಬ್ಬರೂ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶ ಮಾಡಲಾಗಿದೆ. ಊಟಕನೂರು ಗ್ರಾಪಂ ಪಿಡಿಓ ರಾಮಪ್ಪ ನಡಗೇರಿ ವಿರುದ್ಧ ಇಲಾಖಾ ವಿಚಾರಣೆ

ವಿಚಾರಣಾ ವರದಿ ಅನ್ವಯ ಕ್ರಮ ಕೈಗೊಳ್ಳಲು ಜಿಪಂ ಸಿಇಓಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ರಿಂದ ಆದೇಶ ಮಾಡಲಾಗಿದೆ.

Edited By : Ashok M
PublicNext

PublicNext

27/01/2025 01:17 pm

Cinque Terre

26.72 K

Cinque Terre

0