ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷ ಅನಾವರಣ : ಕೋಳಿ,ಮದ್ಯದ ಬಾಟಲಿ ಹಂಚಿಕೆ ವಿಡಿಯೋ ವೈರಲ್

ವಾರಂಗಲ್ : ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ವಿಜಯದಶಮಿಯ ನಿಮಿತ್ತ ಹೊಸ ರಾಷ್ಟ್ರೀಯ ಪಕ್ಷವನ್ನು ಬುಧವಾರ ಅನಾವರಣ ಮಾಡಲಿದ್ದಾರೆ.ಇದಕ್ಕಾಗಿ ಟಿಆರ್ ಎಸ್ ನಾಯಕನೊಬ್ಬ ಸಾರ್ವಜನಿಕವಾಗಿ ಸ್ಥಳೀಯ ಜನರಿಗೆ ಮದ್ಯದ ಬಾಟಲಿ ಹಾಗೂ ಕೋಳಿ ವಿತರಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ.

ಹೌದು ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ವಿಜಯದಶಮಿಯ ದಿನದಂದು ಹೊಸ ರಾಷ್ಟ್ರೀಯ ಪಕ್ಷ ಅನಾವರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಟಿಆರ್ ಎಸ್ ನಾಯಕನೊಬ್ಬ ಸ್ಥಳೀಯ ಜನರಿಗೆ ಸಾರ್ವಜನಿಕವಾಗಿ ಮದ್ಯದ ಬಾಟಲಿ ಹಾಗೂ ಕೋಳಿಯನ್ನು ನೀಡಿದ್ದಾರೆ.

ಇದರ ವಿಡಿಯೋವನ್ನು ಮಾಡಿ ಮಾಧ್ಯಮಗಳಿಗೂ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ವಿವಾದ ಕೂಡ ಸೃಷ್ಟಿಯಾಗಿದೆ.

ವಾರಂಗಲ್ ನಲ್ಲಿ ಈ ಘಟನೆ ನಡೆದಿದ್ದು, ಟಿಆರ್ ಎಸ್ ನಾಯಕ ರಾಜನಾಲಾ ಶ್ರೀಹರಿ ಜನರಿಗೆ ಒಂದು ಕ್ವಾರ್ಟರ್ ಬಾಟಲ್ ಮದ್ಯ ಹಾಗೂ ಕೋಳಿಯನ್ನು ನೀಡಿದ್ದಾರೆ. ಇನ್ನೂ ಕೆಲವು ವರದಿಗಳ ಪ್ರಕಾರ, ದಸರಾ ನಿಮಿತ್ತವಾಗಿ ಬಡಜನರಿಗೆ ಮಾಜಿ ಎಸ್ ಎಎಪಿ ನಿರ್ದೇಶಕ ರಾಜನಾಲಾ ಶ್ರೀಹರಿ ಎಣ್ಣೆ ಹಾಗೂ ಕೋಳಿಯನ್ನು ವಿತರಣೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

04/10/2022 05:48 pm

Cinque Terre

148.5 K

Cinque Terre

17