ಚಿಕ್ಕಬಳ್ಳಾಪುರ : ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಜನ ರೋಸಿಹೋಗಿದ್ದಾರೆ. ಮಾಡಬೇಕಾದ ಜನಪರ ಕಾರ್ಯಗಳನ್ನು ಬಿಟ್ಟು ನಾಯಕರುಗಳು ಪರಸ್ಪರ ಕೇಸರೆರಚಾಟದಲ್ಲಿ ಬ್ಯುಜಿಯಾಗಿರುವದು ನಿಜಕ್ಕೂ ಖೇಧಕರ ಸಂಗತಿ.ಸದ್ಯ ಸಿಎಂ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೊಡೆ ತಟ್ಟಿದ್ದಾರೆ. ಪೇಸಿಎಂ (PayCM) ಪೋಸ್ಟರ್ ಅಭಿಯಾನದ ವಿರುದ್ಧ ಕಾನೂನು ಕ್ರಮ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂತಹ ಬೆದರಿಕೆಗಳಿಗೆಲ್ಲಾ ನಾವು ಹೆದರಲ್ಲ. ಕಾನೂನುಗಳು ನಮಗೂ ಗೊತ್ತಿದೆ. ನಾ ಲಾ ಓದಿದ್ದೀನಿ ಬೊಮ್ಮಾಯಿ ಲಾ ಓದಿಲ್ಲ. ಇಂಜಿನಿಯರಿಂಗ್ ಓದಿರೋದು. ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ ಎಂದು ಕುಟುಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೋದಿ 2018ರಲ್ಲಿ ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂದ್ರಲ್ಲ, ಈಗ ನಾ ಏನು ಅಂತ ಕರಿಯೋಣ. ಭ್ರಷ್ಟಾಚಾರ ಯಾರೇ ಮಾಡಲಿ ಅದು ಕಾನೂನು ಬಾಹಿರ. ಅದು ಸಾಮಾಜಿಕ ರೋಗ. ಅಭಿವೃದ್ಧಿಗೆ ಮಾರಕ ಎಂದು ಕಿಡಿಕಾರಿದ್ದಾರೆ.
PublicNext
24/09/2022 09:14 pm