ಬೆಂಗಳೂರು: ಇದೇ 30 ರಂದು ಭಾರತ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿದೆ.ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಇನ್ನೆನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ. ರಾಹುಲ್ ಗಾಂಧಿಗೆ ಗ್ರ್ಯಾಂಡ್ ವೆಲ್‌ಕಮ್ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಕುರಿತು ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ಪೂರ್ವ ಭಾವಿ ತಯಾರಿ ಸಭೆ ನಡೆಸಲಾಯ್ತು.
ಭಾರತ ಜೋಡೋ ವಿವಿಧ ಕಮಿಟಿಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿಗೆ ಕೆಪಿಸಿಸಿ ನಾಯಕರು ಯಾವ ರೀತಿ ತಯಾರಿ ಮಾಡಿದ್ದಾರೆ ಎಂದು ಈ ಕಮಿಟಿ ಇಂದು ವರದಿ ಸಂಗ್ರಹ ಮಾಡಿದೆ.
PublicNext
24/09/2022 03:58 pm