ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಿದು ವಿಮಾನ ಏರಿದ ಪಂಜಾಬ್ ಸಿಎಂ : ಅವಮಾನಕ್ಕೀಡಾದ್ರಾ ‘ಭಗವಂತ್ ಮಾನ್’

ಪಂಜಾಬ್ ಸಿಎಂ ಭಗವಂತ್ ಮಾನ್ ಪಾನಮತ್ತರಾಗಿ ಭಾರಿ ಅವಮಾನಕ್ಕೀಡಾಗಿದ್ದಾರೆ. ಹೌದು ಮದ್ಯಪಾನ ಮಾಡಿದ್ದ ಅವರನ್ನು ಜರ್ಮನಿಯ ಫ್ರಾಂಕ್ ಫರ್ಟ್ ಏರ್ ಪೋರ್ಟ್ ನಿಲ್ದಾಣದಲ್ಲಿ ವಿಮಾನದಿಂದ ಕೆಳಗೆ ಇಳಿಸಲಾಗಿತ್ತು ಎಂಬ ವರದಿ ಬೆನ್ನಲ್ಲೇ ವಿರೋಧ ಪಕ್ಷಗಳು ಆಮ್ ಆದ್ಮಿ ಪಕ್ಷವನ್ನ ಗುರಿಯಾಗಿಸಿಕೊಂಡಿವೆ ವಾಗ್ದಾಳಿ ನಡೆಸಿವೆ.

ಭಗವಂತ್ ಮಾನ್ ಕುಡಿದು ವಿಮಾನದಲ್ಲಿ ಪ್ರಯಾಣಿಸಲು ಪ್ರಯತ್ನಿಸಿದ್ದರು. ಇದನ್ನ ಗಮನಿಸಿದ ಸಿಬ್ಬಂದಿ ಅವರನ್ನ ಕೆಳಗೆ ಇಳಿಸಿದ್ದಾರೆ. ಹೀಗಾಗಿ ಅವರು ಜರ್ಮನಿಯಿಂದ ದೆಹಲಿಗೆ ಬರೋದು ವಿಳಂಬವಾಗಿದೆ. ಈ ಮೂಲಕ ಪಂಜಾಬ್ ಸಿಎಂ ‘ಪಂಜಾಬಿ’ಗಳನ್ನ ಮುಜುಗರಕ್ಕೆ ಒಳಪಡಿಸಿದ್ದಾರೆ ಎಂದು ಶಿರೋಮಣಿ ಅಕಾಲಿ ದಳ (SAD) ಆರೋಪ ಮಾಡಿದೆ.

ಇದನ್ನ ಅಲ್ಲಗಳೆದಿರುವ ಆಮ್ ಆದ್ಮಿ ಪಕ್ಷ, ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಬರೋದು ತಡವಾಗಿದೆ ಎಂದು ಆಪ್ ಹೇಳಿಕೊಂಡಿದೆ. ವರದಿಗಳ ಪ್ರಕಾರ ಜರ್ಮನಿಗೆ ತೆರಳಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್, ಪಾನಮತ್ತರಾಗಿದ್ದ ಕಾರಣ ಲುಫ್ತಾನ್ಸಾ ಏರ್ ಲೈನ್ಸ್ ವಿಮಾನದಿಂದ ಕೆಳಗೆ ಇಳಿಸಲಾಗಿದೆ. ವಿಮಾನ ಏರಿದಾಗ ಅವರಿಗೆ ನಿಲ್ಲಲು ಕೂಡ ಆಗುತ್ತಿರಲಿಲ್ಲ. ಹೀಗಾಗಿ ಅವರಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

19/09/2022 10:35 pm

Cinque Terre

160.55 K

Cinque Terre

32